ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಮಣ್ಣಿನ ಮಗ ನಿವೃತ್ತ ಇನ್ಸ್ಪೆಕ್ಟರ್ ಜನರಲ್ ಮನೋಜ್ ಬಾಡ್ಕರ್ ಅವರಿಗೆ ದೆಹಲಿಯ ಭಾರತ ಮಂಟಪದಲ್ಲಿ ನಡೆದ ಭವ್ಯವಾದ ಸಮಾರಂಭದಲ್ಲಿ ಭಾರತದ ರಕ್ಷಣಾ ಸಚಿವರಾದ ರಾಜನಾಥ ಸಿಂಗ್ ಅವರು ರಾಷ್ಟ್ರಪತಿಗಳ ಪದಕವನ್ನು ಪ್ರದಾನ ಮಾಡಿದರು.
ಎರಡು ಬಾರಿ ರಾಷ್ಟ್ರಪತಿಗಳಿಂದ ಪದಕ
2023 ರ ಜನವರಿ 26 ರಂದು ಮನೋಜ್ ಬಾಡ್ಕರ್ ಅವರು ಪಶ್ಚಿಮ ವಲಯ ಪ್ರದೇಶದ ಭರತೋಯ ತಟರಕ್ಷಕದಳದ ಮುಖ್ಯಸ್ಥರಾಗಿದ್ದಾಗ ರಾಷ್ಟ್ರಪತಿ ಭವನದಿಂದ ಅಧ್ಯಕ್ಷರ ಪದಕವನ್ನು ಘೋಷಿಸಲಾಗಿತ್ತು. ಮಮನೋಜ್ ಬಾಡ್ಕರ್ ಅವರು ಭಾರತದ ಗೌರವಾನ್ವಿತ ರಾಷ್ಟ್ರಪತಿಗಳಿಂದ ಎರಡು ಬಾರಿ ಪದಕವನ್ನು ಪಡೆದಿದ್ದು ವಿಶೇಷವಾಗಿದೆ.
ವಿಸ್ಮಯ ನ್ಯೂಸ್, ಕಾರವಾರ