Important

ಕಾಸರಕೋಡ್ ಟೊಂಕಾ ಪ್ರದೇಶದಲ್ಲಿ ನಿಷೇಧಾಜ್ಞೆ : ಅಮ್ಮ ಮನೆಗೆ ಬರದಿದ್ರೆ ಸಮುದ್ರಕ್ಕೆ ಹಾರಿ ಸಾಯುತ್ತೇನೆ: ಎಚ್ಚರಿಕೆ ನೀಡಿದ ಬಾಲಕಿ

Share

ಹೊನ್ನಾವರ: ತಾಲೂಕಿನ ಕಾಸರಕೋಡ್ ಟೊಂಕಾ ಉದ್ದೇಶಿತ ವಾಣಿಜ್ಯ ಬಂದರು ವಿರೋಧಿಸಿ ನಿಷೇಧಾಜ್ಞೆಯ ನಡುವೆಯು ಮೀನುಗಾರರು ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ. ಹೊನ್ನಾವರ ತಾಲೂಕಿನ ರಾಷ್ಟ್ರೀಯ ಹೆದ್ದಾರಿ-66 ಪಕ್ಕದಲ್ಲೇ ಇರುವ ಹಿರೇಮಠ ಸ್ಮಶಾನದಿಂದ ಕಾಸರಕೋಡ ಗ್ರಾಮದಲ್ಲಿ ಸಮುದ್ರಗುಂಟ ಇರುವ ರಸ್ತೆಯನ್ನು ಅಭಿವೃದ್ಧಿಪಡಿಸಿ ಬಂದರು ಅಭಿವೃದ್ಧಿ ಯೋಜನಾ ಸ್ಥಳದವರೆಗೆ ಹೋಗುವ ರಸ್ತೆ ಕಾಮಗಾರಿಯ ಸರ್ವೆ ಕಾರ್ಯ ನಡೆಯುವ ಸುತ್ತಲಿನ ಪ್ರದೇಶದಲ್ಲಿ ಕಾನೂನು, ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ನಿಷೇದಾಜ್ಞೆಯನ್ನು ಜಾರಿಗೊಳಿಸಿ ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯ ಆದೇಶಿಸಿದ್ದರು. ಅದರ ಹೊರತಾಗಿಯೂ ಬಂದರು ವಿರೋಧಿಸಿ ಸ್ಥಳೀಯ ಮೀನುಗಾರರು ಪ್ರತಿಭಟನೆ ಹಮ್ಮಿಕೊಂಡಿದ್ದರಿoದ ಪ್ರತಿಭಟನೆನಿರತ ಐವತ್ತುಕ್ಕೂ ಅಧಿಕ ಮೀನುಗಾರರನ್ನು ಪೊಲೀಸರು ಬಂಧಿಸಿದ್ದಾರೆ.

ಪೊಲೀಸರ ವಿರುದ್ಧ ಸ್ಥಳೀಯ ಮೀನುಗಾರರು ಆಕ್ರೋಶ ವ್ಯಕ್ತಪಡಿಸಿ ನಮ್ಮ ಜಾಗ ನಮಗೆ ಬಿಟ್ಟುಕೊಡಿ,ಸರ್ವೇಗೆ ಮುಂದಾದರೆ ನಾವೆಲ್ಲಾ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎನ್ನುವ ಎಚ್ಚರಿಕೆ ನೀಡಿದರು. ಪೊಲೀಸರು ಮತ್ತು ಮೀನುಗಾರಿಕೆ ಸಚಿವ ಮಂಕಾಳು ವೈದ್ಯರ ಮೇಲೆ ಆಕ್ರೋಶ ವ್ಯಕ್ತಪಡಿಸಿದರು. ಸಾಯಂಕಾಲ ನಾಲ್ಕು ಗಂಟೆ ಒಳಗೆ ವಶಕ್ಕೆ ಪಡೆದ ಮೀನುಗಾರರನ್ನು ಬಿಡುಗಡೆಗೊಳಿಸದಿದ್ದಲ್ಲಿ ಸಮುದ್ರಕ್ಕೆ ಹಾರಿ ಪ್ರಾಣ ಬಿಡುವುದಾಗಿ ಎಚ್ಚರಿಕೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಕೆಲ ಕಾಲ ಉದ್ವಿಗ್ನ ಪರಿಸ್ಥಿತಿ ಉಂಟಾಗಿದ್ದು,ಪೊಲೀಸರು,ಸ್ಥಳೀಯರು ಮದ್ಯೆ ಕೆಲಕಾಲ ಮಾತಿನ ಚಕಮಕಿ ಉಂಟಾಗಿತ್ತು. ಮೂವರು ಮಹಿಳೆಯರು,ಇರ್ವರು ಪುರುಷರು ಪ್ರತಿಭಟನೆ ವೇಳೆ ಅಸ್ವಸ್ಥರಾಗಿದ್ದು ತಕ್ಷಣ ಅಂಬ್ಯುಲೆನ್ಸ್ ಮೂಲಕ ತಾಲೂಕಾಸ್ಪತ್ರೆಗೆ ರವಾನಿಸಿ ಚಿಕಿತ್ಸೆ ನೀಡಲಾಗಿದೆ.

ಏತನ್ಮದ್ಯೆ ಶಾಲಾ ವಿದ್ಯಾರ್ಥಿನಿ ಅಪೇಕ್ಷಾ ತಾಂಡೇಲ್ ತಮ್ಮ ತಾಯಿಯನ್ನು ಪೊಲೀಸರು ಪ್ರತಿಭಟನೆ ವೇಳೆ ಬಂಧಿಸಿ ಕರೆದೊಯ್ದದನ್ನು ಖಂಡಿಸಿ,ಮಾಧ್ಯಮದ ಮೂಲಕ ತಮ್ಮ ಅಳಲನ್ನು ತೊಡಿಕೊಂಡಿದ್ದಾರೆ. ಅಮ್ಮ ಮನೆಗೆ ವಾಪಸ್ಸಾಗದಿದ್ದಲ್ಲಿ ಸಮುದ್ರಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಏಚ್ಚರಿಕೆ ನೀಡಿದಳು. ಪ್ರತಿಭಟನೆಯ ನಡುವೆಯೂ ಬಿಗಿಪೊಲೀಸ್ ಬಂದೋಬಸ್ತ್ ನಲ್ಲಿ ಅಧಿಕಾರಿಗಳು ಸರ್ವೇ ಕಾರ್ಯ ಮುಂದುವರೆಸಿದರು. ಭಟ್ಕಳ ಉಪವಿಭಾಗಾಧಿಕಾರಿ ಕಾವ್ಯಾ ರಾಣಿ, ಡಿವೈಎಸ್ ಪಿ ಮಹೇಶ್ ಕೆ,ತಹಶೀಲ್ದಾರ ಪ್ರವೀಣ ಕರಾಂಡೆ,ಪಿಐ ಸಿದ್ರಾಮೇಶ್ವರ ಸ್ಥಳದಲ್ಲೇ ಬಿಡುಬಿಟ್ಟಿದ್ದರು. ತಮ್ಮ ಮನೆ,ಭೂಮಿ ಕಳೆದುಕೊಳ್ಳುವ ಭೀತಿಯಿಂದ ಸಮುದ್ರದಡದಲ್ಲಿ ಮೀನುಗಾರರು ಗುಂಪು ಗುಂಪಾಗಿ ಸೇರಿದ್ದರು.ಪ್ರತಿಭಟನೆಗೆ ಮುಂದಾಗುತ್ತಿದ್ದ ಸ್ಥಳದಲ್ಲಿ ಪೊಲೀಸರು ಎಂಟ್ರಿ ನೀಡಿ ಮೀನುಗಾರರ ಚದುರಿಸುತ್ತಿರುವ ದ್ರಶ್ಯ ಕಂಡುಬoತು.

ವಿಸ್ಮಯ ನ್ಯೂಸ್, ವಿವೇಕ್ ಶೇಟ್, ಹೊನ್ನಾವರ

Share

Don't Miss

ಉಚಿತ ಹೃದಯ ರೋಗ ತಪಾಸಣಾ ಶಿಬಿರ : ಮೇ 31ರ ಶನಿವಾರದಂದು ಕುಮಟಾ ತಾಲೂಕಾಸ್ಪತ್ರೆಯಲ್ಲಿ ಆಯೋಜನೆ

ಕುಮಟಾ: ಶ್ರೀ ರಾಮಚಂದ್ರಾಪುರ ಮಠ ಹೊಸನಗರ ಸೇವಾಖಂಡದ ಯೋಗಕ್ಷೇಮ ವಿಭಾಗ , ಜನಪರ ಹೋರಾಟ ವೇದಿಕೆ ಕುಮಟಾ ಹಾಗೂ ತಾಲೂಕಾಸ್ಪತ್ರೆ ಕುಮಟಾ ಇವರ ಸಹಯೋಗದಲ್ಲಿ ಉಚಿತ ಹೃದಯ ರೋಗ ತಪಾಸಣಾ ಶಿಬಿರವನ್ನು...

ವಾಡಿಕೆಗಿಂತ ಅಧಿಕ ಮಳೆ: ಹವಾಮಾನ ಇಲಾಖೆ ಎಚ್ಚರಿಕೆ ನೋಡಿ?

ಕಾರವಾರ: ಜೂನ್ ತಿಂಗಳಿನಲ್ಲಿ ಆರಂಭವಾಗುವ ಮುಂಗಾರು ಮಳೆಯ ಪ್ರಮಾಣವು ವಾಡಿಕೆಗಿಂತ ಅಧಿಕವಾಗಿರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಈ ಬಾರಿಯ ಮುಂಗಾರು ಹಂಗಾಮಿನಲ್ಲಿ ದೇಶದಾದ್ಯಂತ ಶೇ. 106 ರಷ್ಟು ಮಳೆಯಾಗಲಿದ್ದು, 87...

ಸಂಪನ್ನಗೊoಡ ಹೊನ್ನೆಬೈಲ್ ಹಬ್ಬ: ಹರಿದು ಬಂದ ಭಕ್ತ ಸಾಗರ

ಅಂಕೋಲಾ: ಹೊನ್ನೆಬೈಲ್ ಗ್ರಾಮ ದೇವರುಗಳಾದ ಶ್ರೀಬೊಮ್ಮಯ್ಯ ದೇವರು, ಶ್ರೀಕುಸ್ಲೆ ದೇವರು ಮತ್ತು ಶ್ರೀಮಾಣಿಬೀರ ದೇವರುಗಳ ಬಂಡಿಹಬ್ಬಕ್ಕೆ ಪೂರಕವಾದ ವಿಶೇಷ ಹಬ್ಬ ಸಕಲ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಅತ್ಯಂತ ವಿಜೃಂಭಣೆಯಿoದ ನಡೆಯಿತು. ಕಾರಣಾಂತರಗಳಿoದ...

ಈ ಊರಿನವರ ಗೋಳಿನ ಕಥೆ-ವ್ಯಥೆ ನೋಡಿ

ಶಿರಸಿ: ಇದು ಯಾವುದೋ ಇತಿಹಾಸದ ಕಟ್ಟು ಕಥೆಯಲ್ಲ.. ಅಕ್ಷರಶಃ ಜೀವ ಕೈಯ್ಯಲ್ಲಿಡಿದು ಸಾಗಿ, ಕುಗ್ರಾಮದ ಕರಾಳ ಕಥೆಗೆ ಸಾಕ್ಷಿಯಾದ ಕಣ್ಣುಗಳ ಅಕ್ಷರ ರೂಪದ ಚಿತ್ರಣವಿದು.. ಶಿರಸಿ ತಾಲೂಕಿನ ಗಡಿಭಾಗಕ್ಕೆ ಹೊಂದಿಕೊoಡಿರುವ ಮುಷ್ಕಿ...

ಶಿರಸಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಗಟಾರಕ್ಕೆ ಉರುಳಿಬಿದ್ದ ಖಾಸಗಿ ಬಸ್

ಶಿರಸಿ: ಚಾಲಕನ ನಿಯಂತ್ರಣ ತಪ್ಪಿದ ಖಾಸಗಿ ಬಸ್‌ವೊಂದು ಗಟಾರಕ್ಕೆ ಉರುಳಿದ ಘಟನೆ ಶಿರಸಿ ತಾಲೂಕಿನ ಶಿರಸಿ-ಯಲ್ಲಾಪುರ ರಸ್ತೆಯ ಕಡವೆ ಕ್ರಾಸ್ ಬಳಿ ಸಂಭವಿಸಿದೆ. ಎದುರಿನಿಂದ ಬಂದ ವಾಹನಕ್ಕೆ ಜಾಗ ನೀಡುವ ವೇಳೆ...

ಉಚಿತ ಹೃದಯ ರೋಗ ತಪಾಸಣಾ ಶಿಬಿರ : ಮೇ 31ರ ಶನಿವಾರದಂದು ಕುಮಟಾ ತಾಲೂಕಾಸ್ಪತ್ರೆಯಲ್ಲಿ ಆಯೋಜನೆ

ಕುಮಟಾ: ಶ್ರೀ ರಾಮಚಂದ್ರಾಪುರ ಮಠ ಹೊಸನಗರ ಸೇವಾಖಂಡದ ಯೋಗಕ್ಷೇಮ ವಿಭಾಗ , ಜನಪರ ಹೋರಾಟ ವೇದಿಕೆ ಕುಮಟಾ ಹಾಗೂ ತಾಲೂಕಾಸ್ಪತ್ರೆ ಕುಮಟಾ ಇವರ ಸಹಯೋಗದಲ್ಲಿ ಉಚಿತ ಹೃದಯ ರೋಗ ತಪಾಸಣಾ ಶಿಬಿರವನ್ನು...

Related Articles

ಸಂಪನ್ನಗೊoಡ ಹೊನ್ನೆಬೈಲ್ ಹಬ್ಬ: ಹರಿದು ಬಂದ ಭಕ್ತ ಸಾಗರ

ಅಂಕೋಲಾ: ಹೊನ್ನೆಬೈಲ್ ಗ್ರಾಮ ದೇವರುಗಳಾದ ಶ್ರೀಬೊಮ್ಮಯ್ಯ ದೇವರು, ಶ್ರೀಕುಸ್ಲೆ ದೇವರು ಮತ್ತು ಶ್ರೀಮಾಣಿಬೀರ ದೇವರುಗಳ ಬಂಡಿಹಬ್ಬಕ್ಕೆ...

ಈ ಊರಿನವರ ಗೋಳಿನ ಕಥೆ-ವ್ಯಥೆ ನೋಡಿ

ಶಿರಸಿ: ಇದು ಯಾವುದೋ ಇತಿಹಾಸದ ಕಟ್ಟು ಕಥೆಯಲ್ಲ.. ಅಕ್ಷರಶಃ ಜೀವ ಕೈಯ್ಯಲ್ಲಿಡಿದು ಸಾಗಿ, ಕುಗ್ರಾಮದ ಕರಾಳ...

ಶಿರಸಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಗಟಾರಕ್ಕೆ ಉರುಳಿಬಿದ್ದ ಖಾಸಗಿ ಬಸ್

ಶಿರಸಿ: ಚಾಲಕನ ನಿಯಂತ್ರಣ ತಪ್ಪಿದ ಖಾಸಗಿ ಬಸ್‌ವೊಂದು ಗಟಾರಕ್ಕೆ ಉರುಳಿದ ಘಟನೆ ಶಿರಸಿ ತಾಲೂಕಿನ ಶಿರಸಿ-ಯಲ್ಲಾಪುರ...

ಉಚಿತ ಹೃದಯ ರೋಗ ತಪಾಸಣಾ ಶಿಬಿರ : ಮೇ 31ರ ಶನಿವಾರದಂದು ಕುಮಟಾ ತಾಲೂಕಾಸ್ಪತ್ರೆಯಲ್ಲಿ ಆಯೋಜನೆ

ಕುಮಟಾ: ಶ್ರೀ ರಾಮಚಂದ್ರಾಪುರ ಮಠ ಹೊಸನಗರ ಸೇವಾಖಂಡದ ಯೋಗಕ್ಷೇಮ ವಿಭಾಗ , ಜನಪರ ಹೋರಾಟ ವೇದಿಕೆ...