ಅಂಕೋಲಾ: ಪಟ್ಟಣದಲ್ಲಿ ದಿನದಿಂದ ದಿನಕ್ಕೆ ನಾನಾ ಕಾರಣಗಳಿಂದ ಜನದಟ್ಟಣೆ ಹೆಚ್ಚುತ್ತಿದ್ದು , ಕೆಲವು ಕಡೆ ಆಗಾಗ ಸಂಚಾರ ದಟ್ಟಣೆ ಕಂಡು ಬಂದು ,ಅಂಕೋಲಾವೂ ಮಹಾನಗರಗಳಂತೆ ಬೆಳೆದು ಟ್ರಾಫಿಕ್ ಜಾಮ್ ಆಗಲಾರಂಭಿಸಿದೆಯೇ ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಿಂದ ಕೇಳಿ ಬರಲಾರಂಭಿಸಿದೆ. ಪಟ್ಟಣದ ಮುಖ್ಯ ರಸ್ತೆಯಲ್ಲಿ ಮಿತಿ ಮೀರಿದ ಟ್ರಾಫಿಕ್ ಜಾಮ್ ಕಿರಿಕಿರಿಯಿಂದಾಗಿ ಸಾರ್ವಜನಿಕರು ಕೆಲ ಕಾಲ ಸಂಚಾರ ಸಮಸ್ಯೆ ಎದುರಿಸುವಂತಾಗಿದೆ.
ವಿದ್ಯುತ್ ಶಾರ್ಟ್ ಸರ್ಕ್ಯೂಟ್ ತಂದ ಅವಾಂತರ: ನಸುಕಿನಜಾವ ಅಂಗಡಿಯೊoದಕ್ಕೆ ಬೆಂಕಿ
ಪಟ್ಟಣದ ಜೈಹಿಂದ್ ಹೊಟೇಲ್ ಹತ್ತಿರದ ಕ್ರಾಸ್ ಮೊದಲೇ ಕಿರಿದಾಗಿದ್ದು, ಇಲ್ಲಿ 3 – 4 ಕಡೆಗಳ ರಸ್ತೆಗಳೂ ಕೂಡುವುದರಿಂದ ಸಹಜವಾಗಿಯೇ ಸಂಚಾರ ದಟ್ಟಣೆ ಹೆಚ್ಚಿರುತ್ತದೆ. ಗುಡಿಗಾರಗಲ್ಲಿ ಕ್ರಾಸ್ ನಿಂದ ಬಂಡಿ ಬಾಜಾರದವರೆಗೆ ಹೋಗಿ ಬರುವ ಮುಖ್ಯ ರಸ್ತೆಯ ಎರಡೂ ಕಡೆ ದ್ವಿಚಕ್ರ ತ್ರಿಚಕ್ರ, ಲಘು ಮೋಟಾರ ವಾಹನ ಸೇರಿದಂತೆ ನೂರಾರು ವಾಹನಗಳು ಟ್ರಾಫಿಕ್ ಜಾಮ್ ನಲ್ಲಿ ಸಿಲುಕಿಕೊಳ್ಳುಂತಾಗುತ್ತದೆ.
ಅoಕೋಲಾ ಪೊಲೀಸ್ ಠಾಣೆಯಿಂದ ಕೆಲ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಸೇರಿ ಸುಮಾರು 20 ಕ್ಕೂ ಹೆಚ್ಚು ಜನರು ವರ್ಗಾವಣೆಗೊಂಡಿದ್ದು, ಬದಲಿಯಾಗಿ ಪೂರ್ಣ ಪ್ರಮಾಣದ ಅಧಿಕಾರಿ ಹಾಗೂ ಸಿಬ್ಬಂದಿಗಳ ನಿಯೋಜನೆಯಾಗದಿರುವುದು,ಇರುವ ಕೆಲ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಮನೆ ಮನೆ ಪೊಲೀಸ್ ಕಾರ್ಯಕ್ರಮ, ಬೀಟ್ ವ್ಯವಸ್ಥೆ ಮತ್ತಿತರ ಕಾರಣಗಳಿಂದ ಬೇರೆ ಬೇರೆ ಕಡೆ ಕರ್ತವ್ಯ ನಿರ್ವಹಿಸಬೇಕಿರುವುದರಿಂದ ಮತ್ತು ಅಂಕೋಲಾದಲ್ಲಿ ಸಂಚಾರ ವಿಭಾಗದ ಪಿ. ಎಸ್ ಐ ಇದ್ದರೂ ಸಹ , ಸಿಬ್ಬಂದಿಗಳ ಕೊರತೆ ಮತ್ತು 2 ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ವಿಶಾಲ ವ್ಯಾಪ್ತಿ ಇರುವ ತಾಲೂಕಿನೆಲ್ಲಡೆ ಒನ್ ಮ್ಯಾನ್ ಆರ್ಮಿಯಂತೆ ಕರ್ತವ್ಯ ನಿರ್ವಹಿಸಬೇಕಾದ ಅನಿವಾರ್ಯತೆ ಇರುವುದರಿಂದ , ಅವರಿಗೂ ಎಲ್ಲೆಡೆ ಕಣ್ಗಾವಲಿಡಲು ಕಷ್ಟವಾಗುವ ಸಾಧ್ಯತೆ ಇದೆ.
ಸಂಚಾರ ಸಮಸ್ಯೆ ನಿವಾರಣೆಗೆ ಇಲ್ಲಿ ಪ್ರತ್ಯೇಕ ಟ್ರಾಫಿಕ್ ಪೊಲೀಸ್ ಠಾಣೆ ಅತ್ಯಗತ್ಯವಿದೆ ಎನ್ನುವ ಮಾತು ಪ್ರಜ್ಞಾವಂತ ವಲಯದಿಂದ ಕೇಳಿ ಬಂದಿದೆ. ಠಾಣೆ ಎದುರು ಒಮ್ಮೊಮ್ಮೆ ಹಲವು ಸಿಬ್ಬಂದಿಗಳು ಮೇಲ್ನೋಟಕ್ಕೆ ಕಂಡು ಬಂದರೂ ಸಹ ಬೀಟ್ ವ್ಯವಸ್ಥೆ, ಇಲಾಖೆಯ ಯೋಜನೆಗಳು, ನ್ಯಾಯಾಲಯದ ಕರ್ತವ್ಯ ಮತ್ತಿತರ ಕಾರಣಗಳಿಂದ ಬ್ಯೂಸಿಯಾಗಿರುವುದಿಂದ, ಪಟ್ಟಣದ ಪ್ರಮುಖ ಸ್ಥಳಗಳಲ್ಲಿ ಸಂಚಾರ ಸುವ್ಯವಸ್ಥೆಗೆ ಸಿಬ್ಬಂದಿಗಳೇ ಇಲ್ಲದಂತಾಗಿದೆ ಎಂದರೂ ತಪ್ಪಿಲ್ಲ.
ಮುಂಬರುವ ದಿನಗಳಲ್ಲಿ ಸಾಲು ಸಾಲು ಹಬ್ಬಗಳು ಬರಲಿದ್ಧು ಸಂಚಾರ ನಿಯಂತ್ರಣ ಯಾರ ಹೊಣೆ ಎನ್ನುವುದಕ್ಕಿಂತ, ಸಂಬoಧಿತ ಪುರಸಭೆ , ಲೋಕೋಪಯೋಗಿ ಇಲಾಖೆ, ಪೊಲೀಸ್, ಗೃಹರಕ್ಷಕ ದಳ , ಮತ್ತಿತರ ಇಲಾಖೆಗಳು, ಸಮನ್ವಯತೆಯಿಂದ ಕೆಲಸ ಮಾಡಿ, ಪಾರ್ಕಿಂಗ್ , ಪುಟಪಾತ್ ಅತಿಕ್ರಮಣ, ಬೇಕಾಬಿಟ್ಟಿ ರಸ್ತೆಯಲ್ಲೇ ವ್ಯಾಪಾರ ಮಾಡುವುದು, ಒನ್ ವೇ , ಮತ್ತಿತರ ಅಂಶಗಳತ್ತ ಗಂಭೀರ ಚಿತ್ತ ಹರಿಸಿ , ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳಲೇ ಬೇಕಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ