ಹೊನ್ನಾವರ: ತಾಲೂಕಿನ ಈ ಸೇತುವೆ ಯಾವಾಗ ಕುಸಿಯಬಹುದೋ ಅನ್ನೋ ತರ ಇದೆ. ಹೌದು, ತಾಲೂಕಿನಲ್ಲೇ ಮೊದಲಿಗೆ ಈ ಕರ್ಕಿ ತೂಗುಸೇತುವೆ ಕಟ್ಟಿದ್ದು, ಪ್ರೇಕ್ಷಣೀಯ ಸ್ಥಳವಾಗಿ ಮಾರ್ಪಟ್ಟಿತ್ತು. ಇಂದು ತನ್ನ ಅಂದ ಮತ್ತು ಬಲ ಕಳೆದುಕೊಂಡಿದೆ. ಯಾವುದೇ ಮೆಂಟೇನನ್ಸ್ ಇಲ್ಲದೇ ಸೊರಗಿ ಹೋಗಿದ್ದು, ದಿನನಿತ್ಯ ಓಡಾಡುವ ವಿಧ್ಯಾರ್ಥಿಗಳು, ಸಾರ್ವಜನಿಕರು ಭಯದಲ್ಲೇ ತಿರುಗಾಡಬೇಕಾದ ಪರಿಸ್ಥಿತಿ ಬಂದೊದಗಿದೆ.
ಈ ಬಗ್ಗೆ ಮಾತನಾಡಿದ ಗ್ರಾಮ ಪಂಚಾಯತ ಸದಸ್ಯರಾದ ಹರೀಶ ನಾಯ್ಕ ಈ ತೂಗುಸೇತುವೆ ಶಿಥಿಲಾವಸ್ಥೆಯಲ್ಲಿದ್ದು, ತಡೆಗೋಡೆ ಹಾಗೂ ಬ್ರಿಡ್ಜ್ ಕಮ್ ಬ್ಯಾರೇಜ್ ಮಾಡಿದ್ದಲ್ಲಿ ಇಲ್ಲಿಯ ಜನತೆಗೆ ಅನುಕೂಲವಾಗುತ್ತಿತ್ತು. ಇದರ ಬಗ್ಗೆ ಶಾಸಕರಲ್ಲಿ, ಸಚಿವರಲ್ಲಿ ಮನವಿ ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಇಲ್ಲಿ ವೋಟ್ ಆಧಾರದಲ್ಲಿ ಕೆಲಸ ಆಗುತ್ತಿದೆಯೋ ಎನೋ ಅಂತಾ ಬೇಸರ ವ್ಯಕ್ತಪಡಿಸಿದರು.
ಸ್ಥಳೀಯರಾದ ಪ್ರಕಾಶ ನಾಯ್ಕ ಮಾತನಾಡಿ ಈ ಊರಿಗೆ ಒಂದೇ ಸೇತುವೆಯಾಗಿದ್ದು, ದಿನನಿತ್ಯ ಸಾವಿರಾರು ಜನರು, ವಿದ್ಯಾರ್ಥಿಗಳು ಓಡಾಡುತ್ತಾರೆ. ಈ ಹಿಂದೆ ಸೇತುವೆಯ ಮೇಲೆ ಬೈಕ್ ನ್ನು ತಿರುಗಾಡಲು ನಿರ್ಬಂಧಿಸಲಾಗಿತ್ತು. ಆದರೆ ಇದೇ ಸ್ಥಳದಲ್ಲಿ ಬೈಕ್ ಕಳ್ಳತನವಾಗಿರುವುದರಿಂದ ಹೊಳೆಯ ಆ ಬದಿಯ ಜನರು ಸೇತುವೆಯ ಮೇಲೆ ಬೈಕ್ ನ್ನು ಓಡಾಡಿಸುವಂತಾಗಿದೆ. ಇದರಿಂದ ಜನರು ಭಯದಲ್ಲೇ ಸೇತುವೆಯನ್ನು ದಾಟಬೇಕಾಗಿದ್ದು, ಸಂಬoಧಪಟ್ಟ ಇಲಾಖೆಯ ಅಧಿಕಾರಿಗಳು ಸಮಸ್ಯೆಯನ್ನು ಬಗೆಹರಿಸಿಕೊಡಬೇಕೆಂದು ವಿನಂತಿಸಿಕೊoಡರು.
ಗ್ರಾಮ ಪಂಚಾಯತ ಸದಸ್ಯರಾದ ಸಾವಿತ್ರಿ ಮೇಸ್ತ ಮಾತನಾಡಿ ಊರಿನವರಿಗೆಲ್ಲಾ ಇದೊಂದೆ ಸೇತುವೆಯಾಗಿರೋದ್ರಿಂದ ಶಿಥಿಲಾವಸ್ಥೆಯಲ್ಲಿದ್ದು, ಯಾವ ಸಮಯದಲ್ಲಿ ಬಿದ್ದುಹೋಗಬಹುದು ಅನ್ನೋ ಭಯ ಕಾಡುತ್ತಿದೆ ಎಂದರು. ಇದರ ಬಗ್ಗೆ ತಹಶೀಲ್ದಾರ, ಜಿಲ್ಲಾಪಂಚಾಯತ, ಶಾಸಕರಿಗೆ, ಸಚಿವರಿಗೆ ಮನವಿ ಕೊಟ್ಟಿದ್ದರೂ ಜಾಣಕುರುಡುತನದಿಂದ ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎಂದರು.
ಬೆಳಿಗ್ಗೆಯಿoದ ಸಂಜೆಯ ತನಕ ತೂಗು ಸೇತುವೆ ಮೇಲೆ 7 ರಿಂದ 10 ಕ್ಕೂ ಹೆಚ್ಚು ಜನರು ಇರುವ ತಂಡ ನಿಂತು, ನಿರಂತರವಾಗಿ ನಾಲ್ಕು ತಿಂಗಳಿoದ ಫ್ರೀ-ವೆಡ್ಡಿಂಗ್ , ಫೋಟೋ ಶೂಟ್ ಗಳನ್ನು ಮಾಡುತ್ತಿರುವುದು ಕೂಡ ಮತ್ತಷ್ಟು ಸೇತುವೆ ಹದಗೆಡಲು ಕಾರಣ ಎನ್ನುವ ಮಾತು ಕೂಡ ಸ್ಥಳೀಯರಿಂದ ವ್ಯಕ್ತವಾಗುತ್ತಿದೆ. ಈ ತೂಗು ಸೇತುವೆಗೆ ಇತ್ತೀಚಿಗೆ ಸರಿಯಾದ ನಿರ್ವಹಣೆ ಇಲ್ಲದೆ ಜನರು ಮತ್ತು ಬೈಕ್ ಸವಾರರು ತಿರುಗಾಡಲು ಭಯಪಡ ಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗೆ ಮುಂದುವರಿದರೆ ಸೇತುವೆ ಅಪಾಯದತ್ತ ಸಾಗುವಂತೆ ಕಂಡು ಬರುತ್ತಿದೆ ಎಂದು ಸ್ಥಳೀಯರು ಅಭಿಪ್ರಾಯ.
ಪಾವಿನಕುರ್ವಾ, ಕೆಸರಕೋಡಿ, ಮುಳ್ಳಿಕೇರಿ, ತಾರಿಬಾಗಿಲನ ಸಾವಿರಾರು ಜನರು ಕರ್ಕಿಗೆ ಬರಬೇಕು ಅಂದರೆ ಈ ತೂಗುಸೇತುವೆ ಬಿಟ್ಟರೆ ಬೇರೆ ಮಾರ್ಗವಿಲ್ಲ. ಇನ್ನೂ ಈ ಸೇತುವೆಯ ಮದ್ಯ ಮಧ್ಯ ಭಾಗದಲ್ಲಿ ದೊಡ್ಡದಾದ ಕಣ್ಣು ಬಿದ್ದು ಬಿಟ್ಟಿದೆ. ಸೇತುವೆಗೆ ಹಾಸಲಾದ ಹಲಗೆ ಕನ್ನಾಗಿದೆ. ಈ ಬಗ್ಗೆ ಸಂಬoಧಪಟ್ಟ ಇಲಾಖೆಯ ಅಧಿಕಾರಿವರ್ಗ, ಜನಪ್ರತಿನಿಧೀಗಳು ಸಮಸ್ಯೆಯನ್ನು ಬಗೆಹರಿಸುತ್ತಾರೋ ಎನ್ನುವುದನ್ನು ಕಾದುನೋಡಬೇಕಾಗಿದೆ.
ವಿಸ್ಮಯ ನ್ಯೂಸ್, ವಿವೇಕ್ ಶೇಟ್, ಹೊನ್ನಾವರ