ಹೊನ್ನಾವರ: ಗೇರುಸೊಪ್ಪ ಸುಳೆಮುರ್ಕಿ ಕ್ರಾಸ್ ಹತ್ತಿರ ಶಾಲಾಮಕ್ಕಳ ಪ್ರವಾಸಿ ಬಸ್ ಪಲ್ಟಿಯಾಗಿ, ವಿಧ್ಯಾರ್ಥಿ ಸಾವನಪ್ಪಿರುವ ಘಟನೆ ನಡೆದಿದೆ. ಮೈಸೂರಿನ ಟಿ.ಕೆ ಲೇಔಟ್ ತರಳಬಾಳು ಫ್ರೌಡಶಾಲಾ ವಿದ್ಯಾರ್ಥಿಗಳು ಜೋಗ್ ಫಾಲ್ಸ್ ಪ್ರವಾಸ ಮುಗಿಸಿ ಉತ್ತರಕನ್ನಡದ ಪ್ರವಾಸ ಕೈಗೊಂಡಿದ್ದ ವೇಳೆ ಸುಳೆಮುರ್ಕಿ ಕ್ರಾಸ್ ಹತ್ತಿರ ಘಟನೆ ನಡೆದಿದೆ.
ಓರ್ವ ವಿದ್ಯಾರ್ಥಿ ಮೃತಪಟ್ಟು, 35 ಮಕ್ಕಳು, ಇಬ್ಬರು ಶಿಕ್ಷಕಿಯರು ಗಾಯಗೊಂಡ ಘಟನೆ ನಡೆದಿದೆ. ಅಪಘಾತದಲ್ಲಿ ಪವನ್ ಎಂಬ 16 ವರ್ಷದ ವಿಧ್ಯಾರ್ಥಿ ಸಾವನ್ನಪ್ಪಿದ್ದಾನೆ.
ಸುಳೇಮುರ್ಕಿ ಪದೇ ಪದೇ ಅಪಘಾತ ತಾಣವಾಗಿದ್ದು, ಈ ರಸ್ತೆಯಲ್ಲಿ ಸೂಕ್ತ ವ್ಯವಸ್ಥೆ ಆಗಬೇಕಾಗಿದೆ. ಹೆಚ್ಚಿನ ಚಿಕಿತ್ಸೆಗೆ 3 ಗಾಯಾಳುಗಳನ್ನು ಮಣಿಪಾಲ, ಮಂಗಳೂರು ಆಸ್ಪತ್ರೆಯಲ್ಲಿ ದಾಖಲಿಸಿದ್ದಾರೆ.
ತಾಲೂಕ ಆಸ್ಪತ್ರೆಗೆ ಎಸಿ ಕಾವ್ಯರಾಣಿ , ತಹಶೀಲ್ಧಾರ ಪ್ರವೀಣ ಕರಾಂಡೆ, ಇಓ ಪುಟ್ಟೆಗೌಡ, ಪ.ಪಂ.ಮುಖ್ಯಾಧಿಕಾರಿ ಯೇಸು ಬೆಂಗಳೂರು ಬಿಇಓ ವಿನಾಯಕ ಅವಧಾನಿ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.
ಸಿಪಿಐ ಸಿದ್ದರಾಮೇಶ್ವರ, ಪಿಎಸೈ ಮಂಜುನಾಥ ಪೊಲೀಸ್ ಸಿಬ್ಬಂದಿಗಳು ಅಪಘಾತ ನಡೆದ ಸ್ಥಳಕ್ಕೆ ಭೇಟಿ ನೀಡಿ ಸ್ಥಳಿಯರ ಸಹಕಾರದ ಮೇರೆಗೆ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸುವಲ್ಲಿ ನೆರವಾದರು. ಈ ಸಂಬಂಧಬಸ್ ಚಾಲಕನ ವಿರುದ್ದ ಹೊನ್ನಾವರ ಪೋಲಿಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಘಟನೆಯ ಕುರಿತು ಹೆಚ್ಚಿನ ಮಾಹಿತಿ ತಿಳಿದುಬರಬೇಕಿದೆ.
ವಿಸ್ಮಯ ನ್ಯೂಸ್ ವಿವೇಕ್ ಶೇಟ್ ಹೊನ್ನಾವರ












