Uncategorized

ಅಂಕೋಲಾ ಉಪನೋಂದಣಾಧಿಕಾರಿಗಳ ಕಚೇರಿಗೆ ಸರ್ಚ್ ವಾರೆಂಟ್ ಮೇಲೆ ಬಂದ ಲೋಕಾಯುಕ್ತರ ತಂಡ : ಯಾಕೆ ನೋಡಿ?

Share

ಅಂಕೋಲಾ‌ : ಇಲ್ಲಿನ ಉಪನೋಂದಣಾಧಿಕಾರಿಗಳ ಕಚೇರಿಯಲ್ಲಿ ದಸ್ತಾವೇಜು ನೋಂದಣಿ ಮುಂತಾದ ಕೆಲಸಗಳಲ್ಲಿ ಅನಗತ್ಯ ವಿಳಂಬ ಮತ್ತು ಏಜೆಂಟರ ಹಾವಳಿ ಹೆಚ್ಚಾಗಿರುವ ಕುರಿತು ಸಾರ್ವಜನಿಕರಿಂದ ಆರೋಪಗಳು ಕೇಳಿಬಂದಿದ್ದ ಹಿನ್ನೆಲೆಯಲ್ಲಿ ಗುರುವಾರ ಲೋಕಾಯುಕ್ತ ಅಧಿಕಾರಿಗಳು ಸರ್ಚ ವಾರೆಂಟ್ ಸಹಿತ ಅಂಕೋಲಾ ಉಪನೋಂದಣಾಧಿಕಾರಿಗಳ ಕಚೇರಿಗೆ ದಿಢೀರ್ ದಾಳಿ ಮಾಡಿದ್ದರಿಂದ,ಮಳೆಯ ವಾತಾವರಣದ ನಡುವೆಯೂ ಒಳಗಿದ್ದ ಅಧಿಕಾರಿಗಳು ಮತ್ತು ಕೆಲ ಸಿಬ್ಬಂದಿಗಳು ಕುಳಿತಲ್ಲೇ ಬೆವರುವಂತಾಯಿತು.

ಲೋಕಾಯುಕ್ತ ಅಧಿಕಾರಿ ವಿನಾಯಕ ಬಿಲ್ಲವ ಹಾಗೂ ವಿಜಯ ನೇತೃತ್ವದಲ್ಲಿ 7 ಜನರ ತಂಡ ದಿಡೀರ್ ದಾಳಿ ಮಾಡಿ ನಾಲ್ಕೈದು ತಾಸುಗಳ ಕಾಲ ಕಡತಗಳು ಮತ್ತಿತರ ಕಾಗದ ಪತ್ರಗಳನ್ನು ಪರಿಶೀಲನೆ ನಡೆಸಿ, ಇನ್ನೂ ಹೆಚ್ಚಿನ ಪರಿಶೀಲನೆಗಾಗಿ ಕೆಲವು ಕಡತಗಳ ಪ್ರತಿಗಳನ್ನು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದ್ದು,ಇದು ಪಟ್ಟಣ ವ್ಯಾಪ್ತಿಯಲ್ಲಿ ಸಾರ್ವಜನಿಕ ವಲಯದಲ್ಲಿ ನಾನಾ ರೀತಿಯ ಚರ್ಚೆಗೆ ಕಾರಣವಾದಂತಿದೆ.

ಲೋಕಾಯುಕ್ತರ ದಿಡೀರ್ ಭೇಟಿಯ ಕುರಿತು ಸಂಬಂಧಿಸಿದ ಅಧಿಕಾರಿಗಳಿಂದ ರಾತ್ರಿ 10 ಗಂಟೆ ನಂತರ ಅಧಿಕೃತ ಮತ್ತು ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.ಜಿಲ್ಲೆಯ ಮುಂಡಗೋಡ ಮತ್ತಿತರಡೆ ಕೆಲ ಉಪ ನೋಂದಣಾಧಿಕಾರಿಗಳ ಕಚೇರಿಗಳಲ್ಲಿ ಲಂಚ ಇಲ್ಲವೇ ಮತ್ತಿತರ ಕಾರಣದಿಂದ ಬೇಕಾಯ್ದೆ ಶೀರ ನೋಂದಣಿ ಮಾಡಿಕೊಡಲಾಗುತ್ತದೆ ಎಂಬ ಆರೋಪ ಕೇಳಿಬರುವಂತಾಗಿದೆ.

ಈ ಹಿನ್ನೆಲೆಯಲ್ಲಿಯೂ ಉಪನೊಂದಣಾಧಿಕಾರಿಗಳ ಕಚೇರಿಗೆ ಲೋಕಾಯುಕ್ತರು ದಾಳಿ, ಮಹತ್ವ ಪಡೆದಿದ್ದು, ಆನ್ ಲೈನ್ ನೊಂದಣಿ ಪ್ರಕ್ರಿಯೆ ಹೊರತಾಗಿಯೂ ನಗದು ಮತ್ತಿತರ ರೀತಿಯ ಒಳ ವ್ಯವಹಾರ ನಡೆದಿದ್ದರೆ ಪರಿಶೀಲನೆ ವೇಳೆ ಅವು ಗೊತ್ತಾಗಲಿವೆ ಎನ್ನಲಾಗಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Share

📢 Stay Updated!

Join our official WhatsApp group to get instant news updates, alerts, and exclusive stories – right on your phone.

💬 Join our WhatsApp Group

Don't Miss

ಕುಮಟಾದ ಬ್ರೌನ್ಸ್ ವಿಲೇಜ್ ಫ್ಯಾಮಿಲಿ ಗಾರ್ಡನ್ ರೆಸ್ಟೋರೆಂಟ್ ನಲ್ಲಿ ಖ್ಯಾತ ಕಲಾವಿದರಿಂದ ಲೈವ್ ಮ್ಯೂಜಿಕ್ ನೋಡುತ್ತಾ ರುಚಿ-ಶುಚಿಯಾದ ಆಹಾರ ಸವಿಯುವ ಅವಕಾಶ

ಕುಮಟಾ: ಬ್ರೌನ್ಸ್ ವಿಲೇಜ್ ಫ್ಯಾಮಿಲಿ ಗಾರ್ಡನ್ ರೆಸ್ಟೋರೆಂಟ್ ಕುಮಟಾ, ಇದು ಉತ್ತರಕನ್ನಡ ಜಿಲ್ಲೆಯ ಅತ್ಯುತ್ತಮ ಫ್ಯಾಮಿಲಿ ಗಾರ್ಡನ್ ರೆಸ್ಟೋರೆಂಟ್ ಆಗಿದ್ದು, ಇದೀಗ ಶನಿವಾರ ( ನವೆಂಬರ್ 8 ರಂದು ) ರಾತ್ರಿ...

ಕಲಾಸಿರಿ ಪ್ರಶಸ್ತಿಯು ಬದುಕಿನ ಸಾರ್ಥಕತೆಯ ಜ್ಞಾನದ ಬೆಳಕು ಬೆಳಗಲು ಸಾಧ್ಯ:ಪಿ. ಆರ್. ನಾಯ್ಕ

ಭಟ್ಕಳ : ಒಂದು ಹಣತೆಯಿಂದ ಹಲವು ಹಣತೆಗಳು ಬೆಳಗುವಂತೆ, ಕಲಾಸಿರಿಯು ಬದುಕಿನ ಸಾರ್ಥಕತೆಯ ಜ್ಞಾನದ ಬೆಳಕು ಇತರರ ಬದುಕಿನಲ್ಲೂ ಸದಾ ಬೆಳಗಲು ಸಾಧ್ಯ ಎಂದು ಕಲಾಸಿರಿ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಪಿ....

🌐 📺 Visit Our Media Partner Site

ಉತ್ತರಕನ್ನಡ ಸುದ್ದಿ Update ಪಡೆಯಿರಿ

🔗 Go to Vismaya TV
Related Articles

ಧರ್ಮಸ್ಥಳಕ್ಕೆ ಕಪ್ಪುಚುಕ್ಕೆ ತರುವ ಪ್ರಯತ್ನ: ಬೃಹತ್ ಜನಾಗ್ರಹ-ಧರ್ಮಸಭೆ

ಹೊನ್ನಾವರ: ಪಟ್ಟಣದ ನಾಮಧಾರಿ ಸಭಾಭವನದ ಆವಾರದಲ್ಲಿ ಶ್ರೀ ಧರ್ಮಸ್ಥಳ ಕ್ಷೇತ್ರ ಭಕ್ತಾಭಿಮಾನಿ ವೇದಿಕೆ ಹೊನ್ನಾವರ ವತಿಯಿಂದ...