ಭಟ್ಕಳ: ತಾಲೂಕಿನ ನೂರ್ ಮಸಿದಿ ಎದುರುಗಡೆ ಬೆಳಿಗ್ಗೆ ಬೈಕ್ ಮತ್ತು ಟ್ಯಾಂಕರ್ ನಡುವೆ ಸಂಃವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೆ ಮೃತಪಟ್ಟು, ಆತನ ಪತ್ನಿ ಗಂಭಿರವಾಗಿ ಗಾಯಗೊಂಡ ಘಟನೆ ನಡೆದಿದೆ.
- ಬೈಕ್ ಸವಾರ ಸ್ಥಳದಲ್ಲೇ ಸಾವು
- ಪತ್ನಿಗೆ ಗಂಭೀರ ಗಾಯ
- ಗುತ್ತಿಗೆ ಕಂಪೆನಿ ವಿರುದ್ಧ ಜನರ ಆಕ್ರೋಶ
ರಾಷ್ಟ್ರೀಯ ಹೆದ್ದಾರಿಯಲ್ಲಿ ಭಟ್ಕಳ ಮುಖ್ಯವೃತ್ತದಿಂದ ತಾಲೂಕಾ ಪಂಚಾಯತ ಮಾರ್ಗವಾಗಿ ಬರುತ್ತಿದ್ದ ಬೈಕ್ ಟ್ಯಾಂಕರ್ ಗೆ ತಗುಲಿ ಸವಾರ ಕೆಳಗಡೆ ಬಿದ್ದಿದೆ. ಈ ವೇಳೆ ಟ್ಯಾಂಕರ್ ಬೈಕ್ ಸವಾರನ ತಲೆಯ ಮೇಲೆ ಹರಿದ ಪರಿಣಾಮ ಬೈಕ್ ಸವಾರ ಮೃತಪಟ್ಟಿದ್ದಾನೆ. ಹಿಂಬದಿ ಸೀಟ್ ನಲ್ಲಿ ಕುಳಿತಿದ್ದ ಆತನ ಪತ್ನಿಯ ಕೈಮೇಲೆ ಟ್ಯಾಂಕರ ಹರಿದಿದ್ದು ಆಕೆ ಗಂಭೀರವಾಗಿ ಗಾಯಗೊಂಡಿದ್ದಾಳೆ.
26 ಮತ್ತು 14 ವರ್ಷದಿಂದ ತಲೆಮರೆಸಿಕೊಂಡಿದ್ದ ಆರೋಪಿಗಳ ಬಂಧನ
ಅಪೂರ್ಣ ಕಾಮಗಾರಿ ಕಾರಣವೇ?
ಮುರುಡೇಶ್ವರದ ನಿವಾಸಿ ಈಶ್ವರ ಮಂಜಪ್ಪ ನಾಯ್ಕ ಮೃತ ದುರ್ದೈವಿಯಾಗಿದ್ದು, ಪತ್ನಿ ಭಾರತಿ ಈಶ್ವರ ನಾಯ್ಕ ಅಪಘಾತದಲ್ಲಿ ಗಾಯಗೊಂಡು ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ತಾಲೂಕಿನಲ್ಲಿ ನಡೆದಿರುವ ರಾಷ್ಟ್ರೀಯ ಹೆದ್ದಾರಿಯ ಅಪೂರ್ಣ ಕಾಮಗಾರಿಯಿಂದಾಗಿ ಪದೇ ಪದೇ ಇಂತಹ ಅಪಘಾತಗಳು ಸಂಭವಿಸುತ್ತಿದ್ದು, ಗುತ್ತಿಗೆ ಕಂಪನಿಯ ವಿರುದ್ಧ ಜನ ಹಿಡಿಶಾಪ ಹಾಕಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ.
ವಿಸ್ಮಯ ನ್ಯೂಸ್ ಈಶ್ವರ ನಾಯ್ಕ , ಭಟ್ಕಳ