ಕಾರವಾರ: ಅಕ್ರಮವಾಗಿ ಗೋವಾ ಮದ್ಯ ಸಾಗಾಟ ಪ್ರಕರಣಕ್ಕೆ ಸಂಬoಧಿಸಿದoತೆ ಕಳೆದ 14 ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ಕಾರವಾರ ಚಿತ್ತಾಕುಲ ಪೋಲೀಸರು ಬಂಧಿಸಿದ ಘಟನೆ ನಡೆದಿದೆ. 2011ರಲ್ಲಿ ಬೈಕ್ ಮೇಲೆ ಯಾವುದೇ ಪಾಸ್ ಅಥವಾ ಪರ್ಮಿಟ್ ಇಲ್ಲದೇ ಗೋವಾ ರಾಜ್ಯದ ತಯಾರಿಕೆಯ ಮದ್ಯದ ಬ್ಯಾಗನ್ನು ಇಟ್ಟುಕೊಂಡು ಸಾಗಾಟ ಮಾಡುತ್ತಿದ್ದಾಗ ಈಗ ಸಿಕ್ಕಿಬಿದ್ದಿದ್ದ.
ಗಣೇಶ ಚತುರ್ಥಿ 2025: ಸರ್ಕಾರದ ಮಾರ್ಗಸೂಚಿ ಹೀಗಿದೆ: ಕಡ್ಡಾಯವಾಗಿ ಪಾಲಿಸಬೇಕಾದ ನಿಯಮಗಳು

ಹೌದು, ಕಾರವಾರದ ಕೊಮಾರಪಂತವಾಡ ಕ್ರಾಸ್ ಹತ್ತಿರ ಆರೋಪಿತನಾದ ಆಂದ್ರಪ್ರದೇಶದ ಶಿವರಾಮಿರೆಡ್ಡಿ ಎಂಬಾತನನ್ನು ಪೋಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು. ನ್ಯಾಯಾಲಯದಿಂದ ಜಾಮೀನು ಪಡೆದ ಆರೋಪಿಯು ಕಳೆದ 14 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೇ ತಲೆ ಮರೆಸಿಕೊಂಡಿದ್ದ. ಇದೀಗ ಆರೋಪಿತನ ವಿಳಾಸವನ್ನು ಪತ್ತೆ ಮಾಡಿ ಆರೋಪಿಯನ್ನು ವಶಕ್ಕೆ ಪಡೆದುಕೊಂಡು ಮಾನ್ಯ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ.
26 ವರ್ಷಗಳಿಂದ ತಲೆ ಮರೆಸಿಕೊಂಡಿದ್ದವನ ಬಂಧನ
ಹಳಿಯಾಳ: ತಾಲೂಕಿನ ತೆರಗಾಂವ ಗ್ರಾಮದಲ್ಲಿ ಸೊಸೈಟಿ ಕಳ್ಳತನ ಪ್ರಕರಣಕ್ಕೆ ಸಂಬoಧಿಸಿದoತೆ ನ್ಯಾಯಾಲಯದಿಂದ ಜಾಮೀನು ಪಡೆದುಕೊಂಡು ನಂತರ ನ್ಯಾಯಾಲಯಕ್ಕೆ ಹಾಜರಾಗದೇ 26 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಹಳಿಯಾಳ ಪೋಲೀಸರು ಗೋವಾದಲ್ಲಿ ಪತ್ತೆ ಹಚ್ಚಿ ದಸ್ತಗಿರಿ ಮಾಡಿದ್ದಾರೆ. ಹುಬ್ಬಳ್ಳಿಯ ಗಣೇಶ ಪೇಟೆಯ ನಿವಾಸಿ ತಿಮ್ಮಪ್ಪ ತಿಮ್ಮಣ್ಣ ದಾಸರ ಬಂಧಿತ ಆರೋಪಿಯಾಗಿದ್ದಾನೆ.

ಈತ 2000 ನೇ ಇಸ್ವಿಯಲ್ಲಿ ಹಳಿಯಾಳ ತಾಲೂಕಿನ ತೆರಗಾಂವ ಗ್ರಾಮದಲ್ಲಿ ಸೊಸೈಟಿ ಕಳ್ಳತನ ಪ್ರಕರಣಕ್ಕೆ ಸಂಬoಧಿಸಿದoತೆ ನ್ಯಾಯಲಯದಿಂದ ಜಾಮೀನು ಪಡೆದುಕೊಂಡು ನಂತರ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದನು. ಜಿಲ್ಲಾ ಪೋಲೀಸ್ ಅಧೀಕ್ಷಕರಾದ ದೀಪನ್ ಎಮ್.ಎನ್ ಮಾರ್ಗದರ್ಶನದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಕೃಷ್ಣಮೂರ್ತಿ, ಪೋಲಿಸ್ ವೃತ್ತ ನಿರೀಕ್ಷಕರು ಹಳಿಯಾಳ ಇವರು ಕಳೆದ 26 ವರ್ಷಗಳಿಂದ ತಲೆಮರಿಸಿಕೊಂಡಿರುವ ಆರೋಪಿತನನ್ನು ದಸ್ತಗಿರಿ ಮಾಡುವ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ವಿಸ್ಮಯ ನ್ಯೂಸ್, ಕಾರವಾರ