ಕುಮಟಾ: ತಾಲೂಕಿನ ಕಡ್ಲೆ ಕಡಲ ತೀರದಲ್ಲಿ ಶಿವರಾತ್ರಿ ಉತ್ಸವ ಸಮಿತಿ, ಕಡ್ಲೆ ಇವರು ಶಿರಾತ್ರಿಯ ಪ್ರಯುಕ್ತ ಮರಳಿನಲ್ಲಿ ಬೃಹದಾಕಾರದಲ್ಲಿ ಶಿವನ ವಿಗ್ರಹವನ್ನು ನಿರ್ಮಿಸಿದ್ದಾರೆ. ಈ ಶಿವನ ವಿಗ್ರಹವನ್ನು ನೋಡಲು ಭಕ್ತರು ತಾಲೂಕಿನ ವಿವಿದೆಡೆಯಿಂದ ತಂಡೋಪ ತಂಡವಾಗಿ ಆಗಮಿಸುತ್ತಿದ್ದಾರೆ. ಈ ಉತ್ಸವ ಸಮಿತಿ ಕಳೆದ 13 ವರ್ಷಗಳಿಂದ ಶಿವರಾತ್ರಿ ನಿಮಿತ್ತ ಮರಳಿನಲ್ಲಿ ಶಿವನ ಬೃಹದಾಕಾರದ ವಿಗ್ರಹವನ್ನು ನಿರ್ಮಿಸುತ್ತ ಬಂದಿದ್ದಾರೆ.
ಈ ಬಾರಿ 14 ನೇ ವರ್ಷದ ಪ್ರಯುಕ್ತ ಮರಳಿನಿಂದ 30 ಅಡಿ ಉದ್ದ ಹಾಗೂ 20 ಅಡಿ ಅಗಲವಾದ ಶಿವನ ವಿಗ್ರಹವನ್ನು ರಚನೆ ಮಾಡಿದ್ದಾರೆ. ಈ ಉಸುಕಿನ ಶಿವನ ವಿಗ್ರಹವನ್ನು ಪುರುಶೋತ್ತಮ ನಾಯ್ಕ ಅವರ ನೇತೃತ್ವದಲ್ಲಿ ಕಲಾಕಾರರಾದ ವೆಂಕಟ್ರಮಣ ಆಚಾರಿ, ಪುರಂದರ ಆಚಾರಿ, ಅರುಣ ಆಚಾರಿ ಅವರು ಊರ ನಾಗರಿಕರ ಸಹಕಾರದಲ್ಲಿ ರಚಿಸಿದ್ದಾರೆ.
ವಿಸ್ಮಯ ನ್ಯೂಸ್, ಕುಮಟಾ