ಕುಮಟಾ: ಶ್ರೀ ರಾಮಚಂದ್ರಾಪುರ ಮಠ ಹೊಸನಗರ ಸೇವಾಖಂಡದ ಯೋಗಕ್ಷೇಮ ವಿಭಾಗ , ಜನಪರ ಹೋರಾಟ ವೇದಿಕೆ ಕುಮಟಾ ಹಾಗೂ ತಾಲೂಕಾಸ್ಪತ್ರೆ ಕುಮಟಾ ಇವರ ಸಹಯೋಗದಲ್ಲಿ ಉಚಿತ ಹೃದಯ ರೋಗ ತಪಾಸಣಾ ಶಿಬಿರವನ್ನು ಮೇ 31ರ ಶನಿವಾರದಂದು ಕುಮಟಾ ತಾಲೂಕಾಸ್ಪತ್ರೆಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ತಾಲೂಕಾ ಆಸ್ಪತ್ರೆಯ ವೈದ್ಯಾಧಿಕಾರಿಗಳಾದ ಡಾ. ಗಣೇಶ ನಾಯಕ್ ಅವರು ಹೇಳಿದರು.
ಕುಮಟಾ ಪಟ್ಟಣದ ಖಾಸಗಿ ಹೋಟೆಲ್‌ನಲ್ಲಿ ಹಮ್ಮಿಕೊಂಡ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಮಂಗಳೂರಿನ ಖ್ಯಾತ ಹೃದಯ ರೋಗತಜ್ಞರಾದ ಢಾ. ಸುಬ್ರಹ್ಮಣ್ಯಂ ಅವರು ಕುಮಟಾದ ಸರ್ಕಾರಿ ಆಸ್ಪತ್ರೆಗೆ ಆಗಮಿಸಲಿದ್ದಾರೆ. ಹೃದಯ ಸಂಬoಧಿ ಖಾಯಿಲೆ ಹೊಂದಿದವರಿಗೆ ರಕ್ತದ ಒತ್ತಡ, ಮಧುಮೇಹ, ಇಸಿಜಿ ಪರೀಕ್ಷೆಗಳನ್ನು ನಡೆಸಲಿದ್ದಾರೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಈ ಶಿಭಿರದ ಪ್ರಯೋಜನ ಪಡೆದುಕೊಳ್ಳುವಂತೆ ವಿನಂತಿಸಿಕೊAಡರು.
ತಾಲೂಕಾಸ್ಪತ್ರೆಯ ಖ್ಯಾತ ಹೃದ್ರೋಗ ತಜ್ಞರಾದ ಡಾ. ಶ್ರೀನಿವಾಸನಾಯಕ ಮಾತನಾಡಿ ಶಿಭಿರದ ಮಾಹಿತಿಗಳನ್ನು ತಿಳಿಸಿದರು. ಬಿಜೆಪಿ ಶಿಕ್ಷಣ ಪ್ರೊಕೋಷ್ಟ ಮುಖಂಡರು ಮತ್ತು ಬಿಜೆಪಿ ಮುಖಂಡರಾದ ಎಮ್. ಜಿ. ಭಟ್ ಮಾತನಾಡಿ ಕುಮಟಾ ತಾಲೂಕಿನಲ್ಲಿ ಉಚಿತ ಹೃದಯ ರೋಗ ತಪಾಸಣಾ ಶಿಭಿರ ನಡೆಯುತ್ತಿರುವುದು ಒಂದು ಉತ್ತಮ ವಿಚಾರವಾಗಿದೆ. ಖ್ಯಾತ ಹೃದ್ರೋಗ ತಜ್ಞರು ಕುಮಟಾ ತಾಲೂಕಾಸ್ಪತ್ರೆಗೆ ಆಗಮಿಸಿ ಹೃದಯ ಸಂಬAಧಿ ಖಾಯಿಲೆಯ ಬಗ್ಗೆ ಚಿಕಿತ್ಸೆ ನೀಡುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಇದು ಹೃದ್ರೋಗ ತಜ್ಞರಾದ ಡಾ. ಶ್ರೀನಿವಾಸನಾಯಕ ಅವರ ಕರೆಯ ಮೇರೆಗೆ ನಡೆಯುತ್ತಿರುವ ಶಿಭಿರವಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಶ್ರೀ ರಾಮಚಂದ್ರಾಪುರ ಮಠ ಹೊಸನಗರ ಸೇವಾಖಂಡದ ಯೋಗಕ್ಷೇಮ ವಿಭಾಗದ ಸತೀಶ ಭಟ್, ಟ್ಯಾಕ್ಸಿ ಚಾಲಕಮಾಲಕ ಸಂಘದ ಜಿಲ್ಲಾಧ್ಯಕ್ಷರಾದ ನವೀನ ನಾಯ್ಕ, ತಾಲೂಕಾಸ್ಪತ್ರೆಯ ವೈದ್ಯಾಧಿಕಾರಿಗಳಾದ ಡಾ. ಗಣೇಶ ನಾಯ್ಕ, ಡಾ. ಶ್ರೀನಿವಾಸ ನಾಯಕ, ಬಿಜೆಪಿ ಶಿಕ್ಷಣ ಪ್ರೊಕೋಷ್ಟದ ಎಮ್. ಜಿ. ಭಟ್, ವಿಘ್ನೇಶ ಮುಂತಾದವರಿದ್ದರು.
ವಿಸ್ಮಯ ನ್ಯೂಸ್ ದೀಪೇಶ ನಾಯ್ಕ ಕುಮಟಾ…