Important

ಬಿಜಿಎಸ್ ಸೆಂಟ್ರಲ್ ಸ್ಕೂಲಿನಲ್ಲಿ ಅದ್ದೂರಿಯಿಂದ ನಡೆದ ಶಾಲಾ ಪ್ರಾರಂಭೋತ್ಸವ: ಮಕ್ಕಳನ್ನು ಆದರದಿಂದ ಬರಮಾಡಿಕೊಂಡ ಶಿಕ್ಷಕರು

Share

ಕುಮಟಾ: ಮಿರ್ಜಾನ್ ಶಾಖಾಮಠದ ಪೂಜ್ಯರಾದ ನಿಶ್ಚಲಾನಂದನಾಥಜೀಯವರ ದಿವ್ಯ ಸಾನಿಧ್ಯದಲ್ಲಿ ಇಂದು ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟಿನ ಬಿಜಿಎಸ್ ಸೆಂಟ್ರಲ್ ಸ್ಕೂಲಿನಲ್ಲಿ ಶಾಲಾ ಪ್ರಾರಂಭೋತ್ಸವವನ್ನು ತುಂಬಾ ಸಡಗರದಿಂದ ಮಾಡಲಾಯಿತು. ತಳಿರು ತೋರಣಗಳಿಂದ ವಿದ್ಯಾಲಯವನ್ನು ಅಲಂಕರಿಸಿ, ಶಾಲೆಗೆ ಬಂದ ಮಕ್ಕಳು ಮತ್ತು ಪೋಷಕರಿಗೆ ಶಿಕ್ಷಕ ವೃಂದದವರು ಸಿಹಿವಿತರಿಸಿ, ತುಂಬಾ ಆದರದಿಂದ ಬರಮಾಡಿಕೊಂಡರು.

ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸಿ, ಉದ್ಘಾಟಿಸಿದ ನಿಶ್ಚಲಾನಂದನಾಥ ಸ್ವಾಮೀಜಿಯವರು ವಿದ್ಯಾರ್ಥಿಗಳಿಗೆ ಸಾಂಕೇತಿಕವಾಗಿ ಭಗವದ್ಗೀತೆ ಪುಸ್ತಕವನ್ನು ನೀಡುವುದರ ಮೂಲಕ ಆಶೀರ್ವದಿಸಿ, ಹೊಸ ಶೈಕ್ಷಣಿಕ ವರ್ಷ ತಮಗೆಲ್ಲರಿಗೂ ಒಳಿತುಂಟು ಮಾಡಲಿ ಎಂದು ಶುಭ ಹಾರೈಸಿದರು.

ಬಿಜಿಎಸ್ ಸಂಸ್ಥೆಯ ಶೈಕ್ಷಣಿಕ ನಿರ್ದೇಶಕರಾದ ಎಮ್. ಟಿ. ಗೌಡರವರು ಮಾತನಾಡಿ, ಮಕ್ಕಳಲ್ಲಿ ಹುದುಗಿರುವ ಸುಪ್ತ ಪ್ರತಿಭೆಯನ್ನು ತೆಗೆದು, ಅವರಿಗೆ ಸೂಕ್ತ ಮಾರ್ಗದರ್ಶನ ನೀಡಿ, ಅವರನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುವಲ್ಲಿ ನಮ್ಮ ಸಂಸ್ಥೆಯ ಶಿಕ್ಷಕರ ಪಾತ್ರ ಬಹಳ ಮುಖ್ಯ. ಮಕ್ಕಳು ದೇವರ ಸಮಾನ, ಶಿಕ್ಷಕರು ಸಮಯ ಪಾಲನೆ ಮತ್ತು ದಕ್ಷತೆಯಿಂದ ಕಾರ್ಯನಿರ್ವಹಿಸಿ ಮಕ್ಕಳ ಏಳಿಗೆಗೆ ಶ್ರಮಿಸಬೇಕು ಎಂದರು.

ಬಿಜಿಎಸ್ ಸೆಂಟ್ರಲ್ ಸ್ಕೂಲಿನ ಪ್ರಾಂಶುಪಾಲೆ ಅರ್ಚನಾ ಭಟ್ ಶಾಲೆಗೆ ಆಗಮಿಸಿದ ವಿದ್ಯಾರ್ಥಿಗಳಿಗೆ ಶುಭಕೋರಿ, ಗಣ್ಯರನ್ನು ಸ್ವಾಗತಿಸಿ, ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಉತ್ತಮ ಸಾಧನೆ ತೋರಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ವಿದ್ಯಾರ್ಥಿಗಳು ಪ್ರಾರ್ಥಿಸಿ, ಭಗವದ್ಗೀತೆ ಶ್ಲೋಕ ಪಠಿಸಿದರು.

ವಿಸ್ಮಯ ನ್ಯೂಸ್, ಕುಮಟಾ

Share

Don't Miss

ಉಚಿತ ಹೃದಯ ರೋಗ ತಪಾಸಣಾ ಶಿಬಿರ : ಮೇ 31ರ ಶನಿವಾರದಂದು ಕುಮಟಾ ತಾಲೂಕಾಸ್ಪತ್ರೆಯಲ್ಲಿ ಆಯೋಜನೆ

ಕುಮಟಾ: ಶ್ರೀ ರಾಮಚಂದ್ರಾಪುರ ಮಠ ಹೊಸನಗರ ಸೇವಾಖಂಡದ ಯೋಗಕ್ಷೇಮ ವಿಭಾಗ , ಜನಪರ ಹೋರಾಟ ವೇದಿಕೆ ಕುಮಟಾ ಹಾಗೂ ತಾಲೂಕಾಸ್ಪತ್ರೆ ಕುಮಟಾ ಇವರ ಸಹಯೋಗದಲ್ಲಿ ಉಚಿತ ಹೃದಯ ರೋಗ ತಪಾಸಣಾ ಶಿಬಿರವನ್ನು...

ವಾಡಿಕೆಗಿಂತ ಅಧಿಕ ಮಳೆ: ಹವಾಮಾನ ಇಲಾಖೆ ಎಚ್ಚರಿಕೆ ನೋಡಿ?

ಕಾರವಾರ: ಜೂನ್ ತಿಂಗಳಿನಲ್ಲಿ ಆರಂಭವಾಗುವ ಮುಂಗಾರು ಮಳೆಯ ಪ್ರಮಾಣವು ವಾಡಿಕೆಗಿಂತ ಅಧಿಕವಾಗಿರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಈ ಬಾರಿಯ ಮುಂಗಾರು ಹಂಗಾಮಿನಲ್ಲಿ ದೇಶದಾದ್ಯಂತ ಶೇ. 106 ರಷ್ಟು ಮಳೆಯಾಗಲಿದ್ದು, 87...

ಸಂಪನ್ನಗೊoಡ ಹೊನ್ನೆಬೈಲ್ ಹಬ್ಬ: ಹರಿದು ಬಂದ ಭಕ್ತ ಸಾಗರ

ಅಂಕೋಲಾ: ಹೊನ್ನೆಬೈಲ್ ಗ್ರಾಮ ದೇವರುಗಳಾದ ಶ್ರೀಬೊಮ್ಮಯ್ಯ ದೇವರು, ಶ್ರೀಕುಸ್ಲೆ ದೇವರು ಮತ್ತು ಶ್ರೀಮಾಣಿಬೀರ ದೇವರುಗಳ ಬಂಡಿಹಬ್ಬಕ್ಕೆ ಪೂರಕವಾದ ವಿಶೇಷ ಹಬ್ಬ ಸಕಲ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಅತ್ಯಂತ ವಿಜೃಂಭಣೆಯಿoದ ನಡೆಯಿತು. ಕಾರಣಾಂತರಗಳಿoದ...

ಈ ಊರಿನವರ ಗೋಳಿನ ಕಥೆ-ವ್ಯಥೆ ನೋಡಿ

ಶಿರಸಿ: ಇದು ಯಾವುದೋ ಇತಿಹಾಸದ ಕಟ್ಟು ಕಥೆಯಲ್ಲ.. ಅಕ್ಷರಶಃ ಜೀವ ಕೈಯ್ಯಲ್ಲಿಡಿದು ಸಾಗಿ, ಕುಗ್ರಾಮದ ಕರಾಳ ಕಥೆಗೆ ಸಾಕ್ಷಿಯಾದ ಕಣ್ಣುಗಳ ಅಕ್ಷರ ರೂಪದ ಚಿತ್ರಣವಿದು.. ಶಿರಸಿ ತಾಲೂಕಿನ ಗಡಿಭಾಗಕ್ಕೆ ಹೊಂದಿಕೊoಡಿರುವ ಮುಷ್ಕಿ...

ಶಿರಸಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಗಟಾರಕ್ಕೆ ಉರುಳಿಬಿದ್ದ ಖಾಸಗಿ ಬಸ್

ಶಿರಸಿ: ಚಾಲಕನ ನಿಯಂತ್ರಣ ತಪ್ಪಿದ ಖಾಸಗಿ ಬಸ್‌ವೊಂದು ಗಟಾರಕ್ಕೆ ಉರುಳಿದ ಘಟನೆ ಶಿರಸಿ ತಾಲೂಕಿನ ಶಿರಸಿ-ಯಲ್ಲಾಪುರ ರಸ್ತೆಯ ಕಡವೆ ಕ್ರಾಸ್ ಬಳಿ ಸಂಭವಿಸಿದೆ. ಎದುರಿನಿಂದ ಬಂದ ವಾಹನಕ್ಕೆ ಜಾಗ ನೀಡುವ ವೇಳೆ...

ಉಚಿತ ಹೃದಯ ರೋಗ ತಪಾಸಣಾ ಶಿಬಿರ : ಮೇ 31ರ ಶನಿವಾರದಂದು ಕುಮಟಾ ತಾಲೂಕಾಸ್ಪತ್ರೆಯಲ್ಲಿ ಆಯೋಜನೆ

ಕುಮಟಾ: ಶ್ರೀ ರಾಮಚಂದ್ರಾಪುರ ಮಠ ಹೊಸನಗರ ಸೇವಾಖಂಡದ ಯೋಗಕ್ಷೇಮ ವಿಭಾಗ , ಜನಪರ ಹೋರಾಟ ವೇದಿಕೆ ಕುಮಟಾ ಹಾಗೂ ತಾಲೂಕಾಸ್ಪತ್ರೆ ಕುಮಟಾ ಇವರ ಸಹಯೋಗದಲ್ಲಿ ಉಚಿತ ಹೃದಯ ರೋಗ ತಪಾಸಣಾ ಶಿಬಿರವನ್ನು...

Related Articles

ಸಂಪನ್ನಗೊoಡ ಹೊನ್ನೆಬೈಲ್ ಹಬ್ಬ: ಹರಿದು ಬಂದ ಭಕ್ತ ಸಾಗರ

ಅಂಕೋಲಾ: ಹೊನ್ನೆಬೈಲ್ ಗ್ರಾಮ ದೇವರುಗಳಾದ ಶ್ರೀಬೊಮ್ಮಯ್ಯ ದೇವರು, ಶ್ರೀಕುಸ್ಲೆ ದೇವರು ಮತ್ತು ಶ್ರೀಮಾಣಿಬೀರ ದೇವರುಗಳ ಬಂಡಿಹಬ್ಬಕ್ಕೆ...

ಈ ಊರಿನವರ ಗೋಳಿನ ಕಥೆ-ವ್ಯಥೆ ನೋಡಿ

ಶಿರಸಿ: ಇದು ಯಾವುದೋ ಇತಿಹಾಸದ ಕಟ್ಟು ಕಥೆಯಲ್ಲ.. ಅಕ್ಷರಶಃ ಜೀವ ಕೈಯ್ಯಲ್ಲಿಡಿದು ಸಾಗಿ, ಕುಗ್ರಾಮದ ಕರಾಳ...

ಶಿರಸಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಗಟಾರಕ್ಕೆ ಉರುಳಿಬಿದ್ದ ಖಾಸಗಿ ಬಸ್

ಶಿರಸಿ: ಚಾಲಕನ ನಿಯಂತ್ರಣ ತಪ್ಪಿದ ಖಾಸಗಿ ಬಸ್‌ವೊಂದು ಗಟಾರಕ್ಕೆ ಉರುಳಿದ ಘಟನೆ ಶಿರಸಿ ತಾಲೂಕಿನ ಶಿರಸಿ-ಯಲ್ಲಾಪುರ...

ಉಚಿತ ಹೃದಯ ರೋಗ ತಪಾಸಣಾ ಶಿಬಿರ : ಮೇ 31ರ ಶನಿವಾರದಂದು ಕುಮಟಾ ತಾಲೂಕಾಸ್ಪತ್ರೆಯಲ್ಲಿ ಆಯೋಜನೆ

ಕುಮಟಾ: ಶ್ರೀ ರಾಮಚಂದ್ರಾಪುರ ಮಠ ಹೊಸನಗರ ಸೇವಾಖಂಡದ ಯೋಗಕ್ಷೇಮ ವಿಭಾಗ , ಜನಪರ ಹೋರಾಟ ವೇದಿಕೆ...