Big News

ಅಂಕೋಲಾದಲ್ಲಿ ಬೆಳಂಬಾರ ಸುಗ್ಗಿ ವೈಭವ: ಭರ್ಜರಿ ರೋಡ್ ಶೋ ನಡೆಸಿ ವಿಶೇಷ ಪ್ರದರ್ಶನ

Share

ಅಂಕೋಲಾ: ನಾಡಿನ ಸಾಂಪ್ರದಾಯಿಕ ಮತ್ತು ಜನಪದ ಕಲಾ ಪ್ರಕಾರಗಳಲ್ಲಿ ಸುಗ್ಗಿಗೆ ತನ್ನದೇ ಆದ ಪ್ರಾಮುಖ್ಯತೆ ಇದ್ದು, ಕನ್ನಡ ಕರಾವಳಿ ಜಿಲ್ಲೆಯ ಹಲವೆಡೆ ಸುಗ್ಗಿ ಮತ್ತು ಹೋಳಿ ಸಂಭ್ರಮ ಜೋರಾಗಿದೆ.ಅಂಕೋಲಾ ತಾಲೂಕಿನಲ್ಲಿ ನೆಲೆಸಿರುವ ಹಾಲಕ್ಕಿಗಳು, ಕೋಮಾರಪಂತರು, ನಾಮಧಾರಿಗಳು, ಹಳ್ಳೇರರು ಮತ್ತಿತರರು,ತಮ್ಮ ಸಂಪ್ರದಾಯದoತೆ ಆಯಾ ಆಯಾ ಭಾಗಗಳಲ್ಲಿ ನಿಗದಿಪಡಿಸಿಕೊಂಡ ವರ್ಷಗಳಂದು, ಆಗಾಗ ಸುಗ್ಗಿ ಕುಣಿತ ಪ್ರದರ್ಶಿಸುತ್ತಲೇ ಇರುತ್ತಾರೆ. ಆದರೆ ಬೆಳಂಬಾರದ ಹಾಲಕ್ಕಿಗಳ ಸುಗ್ಗಿ ಸಂಭ್ರಮ ಮಾತ್ರ ಅನಾದಿ ಕಾಲದಿಂದಲೂ ಪ್ರತಿ ವರ್ಷ ಮುಂದುವರೆದುಕೊoಡು ಬಂದಿದೆ.

ಅಷ್ಟೇ ಅಲ್ಲದೇ ಈ ಸುಗ್ಗಿ ತಂಡ ಮತ್ತು ದೈವ ಮಹಿಮೆಗೆ ಅಂದಿನ ಬ್ರಿಟಿಷ್ ಆಡಳಿತವೇ ತಲೆ ಬಾಗಿ, ತದನಂತರ ಸರ್ಕಾರದ ಪರವಾಗಿ ತಾಮ್ರ ಪತ್ರ ನೀಡಿ, ಹೋಳಿ ಹುಣ್ಣಿಮೆ ದಿನ ಬ್ರಿಟಿಷ್ ತಹಸೀಲ್ದಾರ್ ಅವರಿಂದ,ಪ್ರತಿ ವರ್ಷ ತಾಲೂಕ ಕಚೇರಿಗೆ ಮೆರವಣಿಗೆ ಮೂಲಕ ಬಂದು ಹೋಗಲು ವಿನಂತಿ ಮಾಡಿರುವುದು ಈ ಸುಗ್ಗಿ ತಂಡದ ಐತಿಹಾಸಿಕ ಮಹತ್ವವನ್ನು ಎತ್ತಿ ತೋರಿಸುವಂತಿದೆ.ಅoದಿನಿoದ ಇಂದಿನವರೆಗೆ ಈ ಸಂಪ್ರದಾಯ ಮುಂದುವರೆದುಕೊAಡು ಬಂದಿದ್ದು ಸರ್ಕಾರದಿಂದ ಅಧಿಕೃತ ಗೌರವವನ್ನು ಪಡೆಯುತ್ತಿರುವ ನಾಡಿನ ಏಕೈಕ ಸುಗ್ಗಿ ತಂಡ ಎಂಬ ಹಿರಿಮೆಯೂ ಈ ತಂಡಕ್ಕೆ ಇದೆ. ಈ ವರ್ಷ ಮಾರ್ಚ್ 13 ರ ಗುರುವಾರದಂದು ಸಾಯಂಕಾಲ ಅಂಕೋಲಾ ಪಟ್ಟಣ ವ್ಯಾಪ್ತಿಯಲ್ಲಿ ಬೆಳಂಬಾರ ಸುಗ್ಗಿ ತಂಡದ ಮೆರವಣಿಗೆ ಅದ್ದೂರಿಯಾಗಿ ಮತ್ತು ವೈಶಿಷ್ಟ ಪೂರ್ಣವಾಗಿ ನಡೆಯಿತು.

ಈ ವರ್ಷದ ಸುಗ್ಗಿ ಹಗರಣದಲ್ಲಿ ಶಿರೂರು ಗುಡ್ಡ ಕುಸಿತ ದುರಂತದ ಬಳಿಕ ಈ ವರೆಗೂ ಗುಗಾವಳಿ ನದಿಯಲ್ಲಿ ರಾಶಿ ಬಿದ್ದಿರುವ ಮಣ್ಣು ತೆರವುಗೊಳಿಸದಿರುವುದು , ಉಳುವರೆ ಸಂತ್ರಸ್ಥರಿಗೆ ಸರಿಯಾಗಿ ಪುನರ್ವಸತಿ ಕಲ್ಪಿಸದಿರುವುದು ಮತ್ತು ಅದರಿಂದ ಸ್ಥಳೀಯರು ಈಗ ಪಡುತ್ತಿರುವ ಪರಿಪಾಟಲು ಮತ್ತು ಮುಂಬರುವ ಮಳೆಗಾಲದಲ್ಲಿ ಮತ್ತೆ ಎದುರಾಗಲಿರುವ ಅತಂಕದ ಕುರಿತು ಒತ್ತಿ ಹೇಳಲಾಯಿತು. ಪ್ರಮುಖ ಇನ್ನೊಂದು ಪ್ರದರ್ಶನದ ಮೂಲಕ ಜನ ವಿರೋಧಿ ಕೇಣಿ ವಾಣಿಜ್ಯ ಬಂದರು ನಿರ್ಮಿಸುವ ಬದಲು ಜನರ ಜೀವ ಉಳಿಸುವ ಮಲ್ಟಿ ಸ್ಥೆಶಾಲಿಟಿ ಆಸ್ಪತ್ರೆ ನಿರ್ಮಿಸಿ ಎಂಬ ಜನಾಗ್ರಹದ ಕುರಿತು ತಿಳಿಸಲಾಯಿತು. ಕೃಷ್ಣ ಗೆಳೆಯರ ಬಳಗ ದವರು ಪ್ರದರ್ಶಿಸಿದ ದಕ್ಷ ಯಜ್ಞ ಪೌರಾಣಿಕ ರೂಪಕ ಜನವೆಚ್ಚುಗೆ ಗಳಿಸಿತು.

ಶಾಸಕ ಸತೀಶ್ ಸೈಲ್ ಹಾಗೂ ಪೊಲೀಸ್ ವರಿಷ್ಠಾಧಿಕಾರಿ ಎಂ ನಾರಾಯಣ ಬಹು ಹೊತ್ತು ಹಗರಣಗಳನ್ನು ವೀಕ್ಷಿಸಿ , ತಾವು ಸಹ ಕೆಲವರೊಂದಿಗೆ ಪೋಟೋ ಕ್ಲಿಕ್ಕಿಸಿಕೊಂಡು , ಪ್ರದರ್ಶನಕಾರರ ಪ್ರಯತ್ನಕ್ಕೆ ಮತ್ತು ಕಲೆಗೆ ಮೆಚ್ಚುಗೆ ಸೂಚಿಸಿದರು. ಈ ಹಿಂದೆಯೂ ಹಲವು ಬಾರಿ ಹಾಲಕ್ಕಿ ಸಂಭ್ರಮದಲ್ಲಿ ಪಾಲ್ಗೊಳ್ಳುತ್ತಿದ್ದ ಸ್ಯೆಲ್ ಅವರು, ಈ ಬಾರಿಯೂ ಮತ್ತೆ ಸುಗ್ಗಿ ಸಂಭ್ರಮದಲ್ಲಿ ಪಾಲ್ಗೊಂಡು,ಬಹು ಹೊತ್ತು ವೀಕ್ಷಿಸಿ ಬೆಳಂಬಾರ ಹಾಲಕ್ಕಿ ಸುಗ್ಗಿಯ ಮಹತ್ವದ ಕುರಿತು ಹೇಳಿ, ಸರ್ವರಿಗೂ ಹೋಳಿ ಶುಭ ತರಲಿ ಎಂದು ಪ್ರಾರ್ಥಿಸಿದರು
ಹಗರಣಗಳ ಪ್ರದರ್ಶನದ ಬಳಿಕ ಕೊನೆಯಲ್ಲಿ ರಾಜಗಾಂಭೀರ್ಯದೊoದಿಗೆ ಬೆಳಂಬಾರ ಸುಗ್ಗಿ ಮೇಳ ತಹಶೀಲ್ದಾರ್ ಕಚೇರಿಯ ಆವರಣಕ್ಕೆ ಎಂಟ್ರಿ ನೀಡಿತು. ಅಲ್ಲಿ ಗೋಡೆ ಗಣಪತಿ ದೇವರ ಎದುರಿನ ಆವರಣದಲ್ಲಿ ಕೈಯಲ್ಲಿ ನವಿಲು ಗರಿಯಳ್ಳ ಕುಂಚ ಹಿಡಿದು,ಜನಪದ ವಾದ್ಯ ಹಾಗೂ ಚೊ ಹೋ ಚೆ ಹಾಡಿಗೆ ತಕ್ಕಂತೆ ಹೆಜ್ಜೆ ಹಾಕಿದ ಬಣ್ಣ ಬಣ್ಣದ ತುರಾಯಿ ಧರಿಸಿದ ಸುಗ್ಗಿ ತಂಡ ವಿಶೇಷ ಕುಣಿತ ಪ್ರದರ್ಶಿಸಿ ಅಲ್ಲಿ ತಾಲೂಕ ಆಡಳಿತದಿಂದ ತಸ್ಥಿಕ್ ಗೌರವ ಸ್ವೀಕರಿಸಿತು.

ತಾಲೂಕಾಡಳಿತದ ಪರವಾಗಿ ತಹಶೀಲ್ದಾರ ಕಾರ್ಯಾಲಯದ ಅಧಿಕಾರಿಗಳು ಗೌರವ ಸಮರ್ಪಿಸಿದರು. ಬೆಳಂಬಾರ ಊರಗೌಡರಾದ ಷಣ್ಮುಖ ಗೌಡ , ಸುಗ್ಗಿ ತಂಡದ ಪ್ರಮುಖರಾದ ವಸಂತ ಗೌಡ , ಹಾಲಕ್ಕಿ ಒಕ್ಕಲಿಗರ ಸಂಘದ ಜಿಲ್ಲಾಧ್ಯಕ್ಷ ಹನುಮಂತ ಗೌಡ ಮತ್ತಿತರ ಪ್ರಮುಖರು ತಮ್ಮ ಸುಗ್ಗಿ ಸಂಪ್ರದಾಯ ನಡೆದು ಬಂದ ದಾರಿಯ ಕುರಿತು ಅಧಿಕಾರಿಗಳು ಹಾಗೂ ಜನಪ್ರತಿನಿಗಳಿಗೆ ತಿಳಿಸಿ, ಬ್ರಿಟಿಷ್ ಕಾಲದಲ್ಲಿ ನೀಡಿದ ತಾಮ್ರ ಪತ್ರ ಗೌರವದ ಇತಿಹಾಸ ಸ್ಮರಿಸಿ ಆ ಬಳಿಕ ಕರ್ನಾಟಕ ಸರ್ಕಾರದಿಂದ ನೀಡಿದ ತಾಮ್ರ ಪತ್ರ ತಮ್ಮ ಬಳಿ ಇರುವುದನ್ನು ತೋರಿಸಿ ಹೆಮ್ಮೆ ವ್ಯಕ್ತಪಡಿಸಿದರು. ಎಸ್ಪಿ ನಾರಾಯಣ ಎಂ ಮಾತನಾಡಿ ಜನಪದ ಕಲೆಯಾದ ಸುಗ್ಗಿ ಸಂಪ್ರದಾಯ ಹಾಗೂ ಬೆಳಂಬಾಲ ಹಾಲಕ್ಕಿ ಜನರ ಸಂಘಟನೆ ಬಗ್ಗೆ ಮೆಚ್ಚುಗೆ ಸೂಚಿಸಿದರು.

ನಂತರ ಇದೇ ಸುಗ್ಗಿ ತಂಡ ಪಕ್ಕದ ಪೊಲೀಸ್ ಠಾಣೆ ಎದುರು ಕುಣಿತ ಪ್ರದರ್ಶಿಸಿತು. ಪೊಲೀಸ್ ಇಲಾಖೆ ವತಿಯಿಂದ ಸುಗ್ಗಿ ತಂಡಕ್ಕೆ ಗೌರವ ನೀಡಲಾಯಿತು. ಬಳಿಕ ಎಸ್ಪಿ ಎಂ ನಾರಾಯಣ , ಡಿವೈಎಸ್ಪಿ ಗಿರೀಶ,ಅಂಕೋಲಾ ಠಾಣೆ ಸಿಪಿಐ ಚಂದ್ರಶೇಖರ ಮಠಪತಿ, ಶಾಸಕ ಸತೀಶ ಸೈಲ್ ಇವರ ತಲೆಯ ಮೇಲೂ ಸಾಂಕೇತಿಕವಾಗಿ ಸುಗ್ಗಿ ತುರಾಯಿ ಇಟ್ಟು, ಸುಗ್ಗಿ ತಂಡದವರು ಪ್ರೀತಿ- ಗೌರವ ಹಂಚಿಕೊAಡರು. ಪಿ ಎಸೈ ಹಾಗೂ ಠಾಣಾ ಸಿಬ್ಬಂದಿಗಳಿದ್ದರು.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Share

Don't Miss

ಶಿರೂರು ಗುಡ್ಡ ಕುಸಿತ ದುರಂತ : ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ಧ ಪ್ರಣವಾನಂದ ಸ್ವಾಮೀಜಿ

ಅಂಕೋಲಾ: ತಾಲೂಕಿನ ಶಿರೂರು ಗುಡ್ಡ ಕುಸಿತ ದುರ್ಘಟನೆಗೆ ಸಂಬoಧಿಸಿದoತೆ ಅಂಕೋಲಾ ಪೊಲೀಸರು 8 ಜನರ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಶಿರೂರು ದುರಂತಕ್ಕೆ ರಾಷ್ಟ್ರೀಯ ಹೆದ್ದಾರಿ ಇಲಾಖೆ ಮತ್ತು ಗುತ್ತಿಗೆ ಕಂಪನಿಯ ಬೇಜವಾಬ್ದಾರಿ...

ಭಟ್ಕಳದಲ್ಲಿ ಪುನೀತ್ ರಾಜಕುಮಾರ್ ಜನ್ಮದಿನ ಅರ್ಥಪೂರ್ಣವಾಗಿ ಆಚರಣೆ: 80ಕ್ಕೂ ಹೆಚ್ಚು ಜನರಿಂದ ರಕ್ತದಾನ

ಭಟ್ಕಳ: ಪುನಿತ್ ರಾಜಕುಮಾರು ಬದುಕಿದ ರೀತಿ ನಿಜಕ್ಕೂ ಎಲ್ಲರಿಗೂ ಆದರ್ಶಪ್ರಾಯ. ಅವರು ಮಾಡಿರುವ ಸಾಮಾಜಿಕ ಕಾರ್ಯಗಳು ಅದರಲ್ಲೂ ಬಲಗೈಯಲ್ಲಿ ಕೊಟ್ಟದ್ದು ಎಡಗೈಗೂ ಗೊತ್ತಾಗದಂತೆ ಅದನ್ನು ನಿಭಾಯಿಸಿದ ರೀತಿ ನಿಜಕ್ಕೂ ಅನನ್ಯ. ಇಂತಹ...

ಸಿಐಡಿ ಡಿವೈಎಸ್ಪಿಯಾಗಿ ಎಚ್ ಜಯರಾಜಗೆ ಪದೋನ್ನತಿ

ಅಂಕೋಲಾ: ಉತ್ತರ ಕನ್ನಡ ಜಿಲ್ಲೆಯಲ್ಲಿ ತಮ್ಮ ವೃತ್ತಿ ಜೀವನವನ್ನು ಆರಂಭಿಸಿ ಜನ ಸ್ನೇಹಿ ಪೊಲೀಸ್ ವ್ಯವಸ್ಥೆಗೆ ಹೊಸ ಭಾಷ್ಯವನ್ನು ಬರೆಯುವ ಮೂಲಕ ಜನರ ನಡುವೆ ಬೆರೆಯುವ ಪೊಲೀಸ್ ಅಧಿಕಾರಿಯಾಗಿ ಗುರುತಿಸಿಕೊಂಡು ಸಮಾಜಘಾತುಕ...

ವಿಶ್ವಜಲ ದಿನ ಆಚರಣೆ: ಸಾರ್ವಜನಿಕರಿಗೆ ಕಾನೂನು ಅರಿವು ಕಾರ್ಯಕ್ರಮ

ಹೊನ್ನಾವರ: ವಿಶ್ವ ಜಲ ದಿನ” ಕಾನೂನು ಅರಿವು ಕಾರ್ಯಕ್ರಮ ನಡೆಯಿತು. ಗಿಡಕ್ಕೆ ನೀರೆರಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ, ಜೆ.ಎಂ.ಎಫ್.ಸಿ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ತಾಲೂಕು ಕಾನೂನು ಸೇವಾ...

ಜನಸಾಮಾನ್ಯರ ಆರ್ಥಿಕ ಮಟ್ಟ ಏರಿಸುವ ಉದ್ದೇಶದಿಂದ ಗ್ಯಾರಂಟಿ ಯೋಜನೆ ಜಾರಿ: ಜಿಲ್ಲಾಧ್ಯಕ್ಷ ಸಾಯಿ ಗಾವಂಕರ್

ಭಟ್ಕಳ: ಕಾಂಗ್ರೇಸ್ ಪಕ್ಷ ಕೇವಲ ಚುನಾವಣೆ ಗೆಲ್ಲುವ ಉದ್ದೇಶದಿಂದ ಗ್ಯಾರಂಟಿ ಯೋಜನೆಯನ್ನು ಹೊರತರಲಿಲ್ಲ. ಬದಲಾಗಿ ಜನಸಾಮಾನ್ಯರ ಆರ್ಥಿಕ ಮಟ್ಟವನ್ನು ಏರಿಸುವ ನಿಟ್ಟಿನಲ್ಲಿ ಹಾಗೂ ಜನರಲ್ಲಿ ಕೊಳ್ಳುವಿಕೆಯ ಶಕ್ತಿಯನ್ನು ಹೆಚ್ಚಿಸಿ ಆರ್ಥಿಕ ಚೈತನ್ಯಕ್ಕೆ...

ಶಿರೂರು ಗುಡ್ಡ ಕುಸಿತ ದುರಂತ : ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ಧ ಪ್ರಣವಾನಂದ ಸ್ವಾಮೀಜಿ

ಅಂಕೋಲಾ: ತಾಲೂಕಿನ ಶಿರೂರು ಗುಡ್ಡ ಕುಸಿತ ದುರ್ಘಟನೆಗೆ ಸಂಬoಧಿಸಿದoತೆ ಅಂಕೋಲಾ ಪೊಲೀಸರು 8 ಜನರ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಶಿರೂರು ದುರಂತಕ್ಕೆ ರಾಷ್ಟ್ರೀಯ ಹೆದ್ದಾರಿ ಇಲಾಖೆ ಮತ್ತು ಗುತ್ತಿಗೆ ಕಂಪನಿಯ ಬೇಜವಾಬ್ದಾರಿ...

Related Articles

ವಿಶ್ವಜಲ ದಿನ ಆಚರಣೆ: ಸಾರ್ವಜನಿಕರಿಗೆ ಕಾನೂನು ಅರಿವು ಕಾರ್ಯಕ್ರಮ

ಹೊನ್ನಾವರ: ವಿಶ್ವ ಜಲ ದಿನ” ಕಾನೂನು ಅರಿವು ಕಾರ್ಯಕ್ರಮ ನಡೆಯಿತು. ಗಿಡಕ್ಕೆ ನೀರೆರಯುವ ಮೂಲಕ ಕಾರ್ಯಕ್ರಮಕ್ಕೆ...

ಅಂಕೋಲಾದಲ್ಲಿ ಹೆಜ್ಜೆಗುರುತು ಮತ್ತು ಸರ್ವಮಯಿ ಕಿರುಚಿತ್ರ ಬಿಡುಗಡೆ: ಸಖಥ್ ಸದ್ದು ಮಾಡ್ತಿದೆ ವಿದ್ಯಾರ್ಥಿಗಳೇ ನಿರ್ಮಿಸಿ ನಿರ್ದೇಶಿಸಿದ ಚಿತ್ರ

ಅಂಕೋಲಾ: ಮಹಿಳಾ ದಿನಾಚರಣೆಯ ಪ್ರಯುಕ್ತ ಕೆ.ಎಲ್. ಇ ಶಿಕ್ಷಣ ಮಹಾವಿದ್ಯಾಲಯದ ವಿದ್ಯಾರ್ಥಿಗಳು ನಿರ್ಮಿಸಿರುವ ಎರಡು ಕಿರುಚಿತ್ರಗಳನ್ನು...

ಬುರುಡೆ ಜಲಪಾತ ವೀಕ್ಷಣೆಗೆ ಪ್ರತಿದಿನ ನೂರಾರು ಪ್ರವಾಸಿಗರು: ಕಾಡುತ್ತಿದೆ ಮೂಲಭೂತ ಸೌಕರ್ಯ ಕೊರತೆ

ಸಿದ್ದಾಪುರ: ತಾಲೂಕಿನ ಕ್ಯಾದಗಿ ಗ್ರಾಮ ಪಂಚಾಯತ್ ಸಮೀಪ ಇರುವ ಬುರುಡೆ ಜಲಪಾತಕ್ಕೆ ಮೂಲಭೂತ ಸೌಕರ್ಯಗಳನ್ನು ಒದಗಿಸಿ...

ಅರ್ಥಪೂರ್ಣವಾಗಿ ಮಹಿಳಾ ದಿನಾಚರಣೆ: ಸಾಧಕರಿಗೆ ಸಂದಿತು ಸನ್ಮಾನ

ಹೊನ್ನಾವರ: ತಾಲೂಕು ಕಾನೂನು ಸೇವಾ ಸಮಿತಿ, ತಾಲೂಕಾಡಳಿತ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹಾಗೂ ಪ್ರಾಥಮಿಕ ಶಾಲಾ...