ಹೊನ್ನಾವರ: ತಾಲೂಕು ಕಾನೂನು ಸೇವಾ ಸಮಿತಿ, ತಾಲೂಕಾಡಳಿತ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಹೊನ್ನಾವರ ಇವರ ಸಂಯುಕ್ತ ಆಶ್ರಯದಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಮತ್ತು ವಿಚಾರ ಸಂಕಿರಣ ಕಾರ್ಯಕ್ರಮ ಪಟ್ಟಣದ ನಾಮಧಾರಿ ಸಭಾಭವನದಲ್ಲಿ ನಡೆಯಿತು.
“ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಮತ್ತು ವಿಚಾರ ಸಂಕಿರಣವನ್ನು ಪಿಎಸ್‌ಐ ಮಮತಾ ನಾಯ್ಕ ಅವರು ಉದ್ಘಾಟಿಸಿ ಮಾತನಾಡಿದರು. ಮನುಸ್ಮೃತಿಯಲ್ಲಿ ಹೆಣ್ಣನ್ನು ನಾಲ್ಕು ಗೋಡೆಯೊಳಗೆ ಸಿಮೀತವಾಗಿಡುವಂತೆ ಬರೆಯಲಾಗಿದೆ. ಆದರೆ ಇಂದು ಎಲ್ಲಾ ರಂಗದಲ್ಲಿಯೂ ಮಹಿಳೆ ಸಮರ್ಥಳು ಎಂದು ತೋರಿಸಿದ್ದು, ಭಾರತದ ರಾಷ್ಟ್ರಪತಿ ಹುದ್ದೆಯನ್ನು ಅಲಂಕರಿಸಿ ಸಮರ್ಥವಾಗಿ ನಿಭಾಯಿಸಿದ್ದಾಳೆ. ವಿವಾಹದ ಬಳಿಕ ಹೆಣ್ಣು ಇಂದು ತಮ್ಮ ವೃತಿಯಿಂದ ದೂರವಾಗುತ್ತಿದ್ದಾಳೆ. ಸ್ವಾವಲಂಭಿ ಜೀವನ ನಡೆಸಲು ವಿವಾಹದ ನಂತರವು ಶಿಕ್ಷಣ ಹಾಗೂ ಉದ್ಯೋಗ ಮುಂದುವರೆಸಬೇಕು. ಸರ್ಕಾರವು ಹಲವು ಸೌಲಭ್ಯವನ್ನು ಬಳಸಿಕೊಳ್ಳಬೇಕು ಎಂದರು.
ಹೊನ್ನಾವರ ಜೆ.ಎಂ.ಎಫ್.ಸಿ ನ್ಯಾಯಲಯದ ಸಹಾಯಕ ಸರಕಾರಿ ಅಭಿಯೋಜಕರಾದ ಸಂಪದಾ ಗುನಗಾ ಕಾನೂನು ಸಾಕ್ಷರತೆ ಮತ್ತು ಮಹಿಳೆಯರ ಸಬಲಿಕರಣದ ಕುರಿತು ಉಪನ್ಯಾಸ ನೀಡಿ,ಮಹಿಳೆ ಎಂದರೆ ಅಬಲೆಯಲ್ಲ,ಸಬಲೆ.ಇಂದು ಮಹಿಳೆಯರ ರಕ್ಷಣೆಗಾಗಿ ಅನೇಕ ಕಾನೂನುಗಳಿದ್ದರು ಅನೇಕ ವಲಯಗಳಲ್ಲಿ ತೊಂದರೆ ಅನುಭವಿಸುವುದು ಮುಂದುವರೆದಿದೆ.ಕೆಲಸದ ಒತ್ತಡದಿಂದ ಕುಟುಂಬದೊoದಿಗೆ ಸುಖಮಯ ಜೀವನ ಕಳೆಯುವುದು ಕಡಿಮೆಯಾಗುತ್ತಿದೆ. ಮಹಿಳೆಯರಿಗಾಗಿ ಇರುವ ಕಾನೂನುಗಳ ಅರಿವು ಹೊಂದಬೇಕು.ದೌರ್ಜನ್ಯ ಮೀತಿ ಮೀರಿದಾಗ ಮಾತ್ರ ಕಾನೂನು ಮೊರೆ ಹೋಗಬೇಕೆ ವಿನಃ,ಸಣ್ಣಪುಟ್ಟ ವಿಚಾರಗಳಿಗು ಕಾನೂನು ಎನ್ನುವ ಬದಲು ಸಮಸ್ಯೆ ನಿಮ್ಮಲ್ಲಿಯೇ ಬಗೆಹರಿಸಿಕೊಳ್ಳಿ ಎಂದು ಸಲಹೆ ನೀಡಿದರು.
ಪ್ರವೀಣ ಕರಾಂಡೆ ಮಾತನಾಡಿ, ಮಹಿಳೆಯರ ಹಕ್ಕುಗಳು, ಸಮಾನತೆ ಮತ್ತು ಸಬಲೀಕರಣಕ್ಕೆ ಎಲ್ಲ ಅವಕಾಶಗಳು ಲಭ್ಯವಿದೆ. ಮಹಿಳೆಯರು ಇಂದು ಉನ್ನತ ಸ್ಥಾನವನ್ನು ಅಲಂಕರಿಸುವ ಮೂಲಕ ಅವರ ಶಕ್ತಿ ಮತ್ತು ಸಾಮರ್ಥ್ಯವನ್ನು ತೋರಿಸಿಕೊಡುತ್ತಿದ್ದಾರೆ. ಸರ್ಕಾರಿ ಕಚೇರಿಗಳಲ್ಲಿ ಇಂದು ಶೇ. 70 ರಿಂದ 80 ರಷ್ಟು ಮಹಿಳೆಯರು ವಿವಿಧ ಹುದ್ದೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಮಹಿಳೆಯರಿಗೆ ಗೌರವ ಸ್ಥಾನಮಾನವಿದೆ ಎಂದರು. ಈ ಸಂದರ್ಭದಲ್ಲಿ ಶಾಲಾ ಶಿಕ್ಷಕರನ್ನು, ಸನ್ಮಾನಿಸಲಾಯಿತು. ತಾಲೂಕ ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಉಪಾಧ್ಯಕ್ಷೆ ಲಕ್ಷ್ಮಿ ಎಚ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ವಿಸ್ಮಯ ನ್ಯೂಸ್, ವಿವೇಕ್ ಶೇಟ್, ಹೊನ್ನಾವರ