ಭಟ್ಕಳ: ತಾಲ್ಲೂಕಿನ ರೈಲ್ವೆ ಸ್ಟೇಷನ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಿಬ್ಬಂದಿ ಓರ್ವ ತಮ್ಮ ಕರ್ತವ್ಯ ಮುಗಿಸಿ ಬೈಕ್ ನಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ಬೈಕ್ ನಿಯಂತ್ರಣ ತಪ್ಪಿ ಗಟಾರ ನಲ್ಲಿ ಬಿದ್ದು ಸಾವನ್ನುಪ್ಪಿದ ಘಟನೆ ನಡೆದಿದೆ. ಮೃತಪಟ್ಟ ವ್ಯಕ್ತಿ ಸಂಜಯ ಕುಮಾರ ತಂದೆ ಗಣಪಯ್ಯ ಶೇರುಗಾರ 52 ವರ್ಷ. ಇವರು ಬೈಂದೂರು ಬಾಡ ನಿವಾಸಿಎಂದು ತಿಳಿದು ಬಂದಿದೆ.
ಇಲ್ಲಿನ ಕೊಂಕಣ ರೈಲ್ವೆಯಲ್ಲಿ ಇಂಜಿನಿಯರಿoಗ್ ವಿಭಾಗದಲ್ಲಿ ಟ್ರಾಕ್‌ಮ್ಯಾನ್ ಕಾರ್ಯನಿರ್ವಹಿಸುತ್ತಿದ್ದು ಇವರು ರಾತ್ರಿ ಪಾಳಿ ಡ್ಯೂಟಿ ಮುಗಿಸಿ ಬೆಳಗ್ಗೆ 7 ರಿಂದ 7:30 ಸುಮಾರಿಗೆ ಭಟ್ಕಳ ದಿಂದ ಬೈಂದೂರು ಕಡೆಗೆ ತಮ್ಮ ಬೈಕ್ ಮೇಲೆ ತೆರಳುವ ಸಂದರ್ಭದಲ್ಲಿ ಇಲ್ಲಿನ ಬೆಳಕೆ ಸೊಸೈಟಿಯ ಹತ್ತಿರದ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿ ಆಕಸ್ಮಿಕವಾಗಿ ಬೈಕ್ ನಿಯಂತ್ರಣ ತಪ್ಪಿ ರಸ್ತೆಯ ಪಕ್ಕದಲ್ಲಿ ಇದ್ದ ಗಟಾರಾ ನಲ್ಲಿ ಬಿದ್ದು ಭಾರೀ ಗಾಯಗೊಂಡು ಸ್ಥಳದಲ್ಲಿ ಮೃತಪಟ್ಟಿದ್ದಾರೆ. ಈ ಬಗ್ಗೆ ಭಟ್ಕಳ ಗ್ರಾಮೀಣ ಠಾಣೆಯಲ್ಲಿ ರೈಲ್ವೇ ಜೂನಿಯರ್ ಇಂಜಿನಿಯರ ಆದ ಪಾಯಸ್ ತಂದೆ ತೊಮ್ಮಿ,ದೂರು ನೀಡಿದ್ದಾರೆ. ಗ್ರಾಮೀಣ ಠಾಣೆ ಪಿ.ಎಸ್.ಐ ರನ್ ಗೌಡ್ ಸ್ಥಳಕ್ಕೆ ತೆರಳಿ ಪರಿಶೀಲಿಸಿ ದೂರನ್ನು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ
ವಿಸ್ಮಯ ನ್ಯೂಸ್ ಈಶ್ವರ್ ನಾಯ್ಕ ಭಟ್ಕಳ