Important

ಹೋಮಿಯೋಪತಿ ಸಂಸ್ಥಾಪಕ ಹಾನಿಮ್ಯಾನ್ ಅವರ 271ನೇ ಜನ್ಮ ದಿನಾಚರಣೆ

Share

ಅಂಕೋಲಾ: ಇಂಗ್ಲಿಷ್ ಔಷಧಿಗಳನ್ನು ಸೇವಿಸಿದಾಗ ತಾತ್ಕಾಲಿಕವಾಗಿ ಕಾಯಿಲೆ ವಾಸಿಯಾದಂತೆ ಅನ್ನಿಸಿದರೂ, ಕೆಲವೇ ದಿನಗಳಲ್ಲಿ ಅದು ಮರುಕಳಿಸುವ ಸಾಧ್ಯತೆ ಇರುತ್ತದೆ. ಆದರೆ ಹೋಮಿಯೋಪತಿ ಚಿಕಿತ್ಸೆಯು ಕಾಯಿಲೆಯನ್ನು ಶಾಶ್ವತವಾಗಿ ಗುಣಪಡಿಸುವುದಲ್ಲದೆ, ಯಾವುದೇ ಅಡ್ಡಪರಿಣಾಮಗಳನ್ನು ಹೊಂದಿರುವುದಿಲ್ಲ ಎಂದು ನಿವೃತ್ತ ಎಎಸ್‌ಐ ಶಿವಾನಂದ ನಾಯ್ಕ್ ತಮ್ಮ ಮತ್ತು ಕುಟುಂಬದ ಜೀವನಾನುಭವ ಹಂಚಿಕೊoಡರು. ಅಂಕೋಲಾ ಪಟ್ಟಣದ ಬಸ್ ನಿಲ್ದಾಣದ ಎದುರಿನ ಶೆಟ್ಟಿ ಮೆಡಿಕಲ್ಸ್ ಕಾಂಪ್ಲೆಕ್ಸ್ ನಲ್ಲಿರುವ ಆಯುಷ್ ಹೋಮಿಯೋಪತಿ ಕ್ಲಿನಿಕ್‌ನಲ್ಲಿ ಹೋಮಿಯೋಪತಿ ಸಂಸ್ಥಾಪಕ ಕ್ರಿಶ್ಚಿಯನ್ ಫ್ರೆಡ್ರಿಚ್ ಸಾಮ್ವೆಲ್ ಹಾನಿಮ್ಯಾನ್ ಅವರ 271ನೇ ಜನ್ಮ ದಿನದ ಅಂಗವಾಗಿ ಆಯೋಜಿಸಲಾಗಿದ್ದ ಉಚಿತ ವೈದ್ಯಕೀಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.


ತ್ವರಿತವಾಗಿ ಗುಣಮುಖರಾಗಲು ಇಂಗ್ಲಿಷ್ ಮೆಡಿಸಿನ್ ಮೊರೆ ಹೋಗುವುದು ಅಥವಾ ಟಿವಿ-ಪತ್ರಿಕೆಗಳ ಆಕರ್ಷಕ ಜಾಹೀರಾತು ನೋಡಿ ಆಯುರ್ವೇದ ಹೆಸರಿನಲ್ಲಿ ಸಿಗುವ ನಕಲಿ ಔಷಧಿಗಳನ್ನು ಬಳಸುವುದು ಆರೋಗ್ಯಕ್ಕೆ ಹಾನಿಕಾರಕ ಎಂದು ಶಿವಾನಂದ ನಾಯ್ಕ ಎಚ್ಚರಿಸಿದರು.
ಡಾ ಮಧುರಾ ನಾಯ್ಕ ನೀಡಿದ ಹೋಮಿಯೋಪತಿ ಸಲಹೆ ಮತ್ತು ಚಿಕಿತ್ಸೆಯಿಂದ ನನ್ನ ಮೂತ್ರಪಿಂಡದ ಕಲ್ಲು ಸಮಸ್ಯೆ ನಿಧಾನವಾಗಿ ನಿವಾರಣೆಯಾಗುತ್ತಿದೆ ಮತ್ತು ನನ್ನ ಪತ್ನಿಯ ಮಂಡಿ ನೋವು ಮತ್ತು ಆರೋಗ್ಯದಲ್ಲೂ ಗಣನೀಯ ಸುಧಾರಣೆ ಕಂಡುಬoದಿದೆ ಎಂದು ಅವರು ತಮ್ಮ ಆರೋಗ್ಯ ಸಮಸ್ಯೆ ಮತ್ತು ಪರಿಹಾರದ ಧೀರ್ಘ ಅನುಭವ ಹಂಚಿಕೊoಡರು.

ಹೋಮಿಯೋಪತಿಯು ಅತ್ಯಂತ ಸುರಕ್ಷಿತ

ಈ ಸರಳ ಮತ್ತು ಅರ್ಥಪೂರ್ಣ ಕಾರ್ಯಕ್ರಮವನ್ನು ಗಿಡಕ್ಕೆ ನೀರೆರೆಯುವ ಮೂಲಕ ಮತ್ತು ಹೋಮಿಯೋಪತಿ ಸಂಸ್ಥಾಪಕ ಕ್ರಿಶ್ಚಿಯನ್ ಫ್ರೆಡ್ರಿಚ್ ಸಾಮ್ವೆಲ್ ಹಾನಿಮ್ಯಾನ್ ಅವರ ಪ್ರತಿಮೆಗೆ ಪುಷ್ಪ ಹಾರ ತೊಡಿಸಿ ಗೌರವ ನಮನ ಸಲ್ಲಿಸುವ ಮೂಲಕ ಉದ್ಘಾಟಿಸಲಾಯಿತು.
ಅಂಕೋಲಾದ ಆಯುಷ್ ಹೋಮಿಯೋಪತಿ ಕ್ಲಿನಿಕ್ ನ ಹೆಸರಾಂತ ವೈದ್ಯರಾದ ಡಾ. ಮಧುರಾ ನಾಯಕ, ಹೋಮಿಯೋಪತಿಯ ಬಗ್ಗೆ ತಿಳಿಸುತ್ತಾ, ಇಲ್ಲಿ ನೀಡುವ ಬಿಳಿ ಗುಳಿಗೆಗಳು ಮೇಲ್ನೋಟಕ್ಕೆ ಒಂದೇ ರೀತಿ ಕಂಡರೂ, ಪ್ರತಿ ರೋಗಿಯ ಸಮಸ್ಯೆಗೆ ಹಾಗೂ ರೋಗದ ಗುಣಲಕ್ಷಣಕ್ಕೆ ಅನುಗುಣವಾಗಿ ಅವುಗಳಲ್ಲಿ ಬಳಸುವ ಔಷಧೀಯ ಅಂಶಗಳು ಬೇರೆ ಬೇರೆಯಾಗಿರುತ್ತವೆ ಎಂದು ತಿಳಿಸಿ, ಆರೋಗ್ಯ ಸಮಸ್ಯೆಗಳಿರುವವರು ಅಂಕೋಲಾ ಬಸ್ ನಿಲ್ದಾಣದ ಎದುರು ಇರುವ ಶೆಟ್ಟಿ ಮೆಡಿಕಲ್ಸ್ ಕಾಂಪ್ಲೆಕ್ಸ್ ನಲ್ಲಿರುವ ತಮ್ಮ ಕ್ಲಿನಿಕ್ ಗೆ ಬಂದರೆ , ಅವರಿಗೆ ಆರೋಗ್ಯ ಸಲಹೆ ಮತ್ತು ಸೂಕ್ತ ಚಿಕಿತ್ಸೆ ಈ ರೂಪದ ಸೇವೆ ನೀಡುತ್ತೇವೆ ಎಂದರು.

ಜನಶಕ್ತಿ ವೇದಿಕೆಯ ಅಧ್ಯಕ್ಷ, ಆಯುಷ್ ಕ್ಲಿನಿಕ್ ವೈದ್ಯೆ ಮಧುರಾ ನಾಯಕ ಅವರ ತಂದೆ ಮತ್ತು ಸಮಾಜ ಸೇವಕ ಮಾಧವ ನಾಯಕ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ, ಪುರಾತನ ವೈದ್ಯ ಪದ್ಧತಿಯಾದ ಹೋಮಿಯೋಪತಿಯು ಅತ್ಯಂತ ಸುರಕ್ಷಿತವಾಗಿದ್ದು ತಾಲೂಕಿನ ಹಾಗೂ ಸುತ್ತಮತ್ತಲಿನ ಜನರ ಆರೋಗ್ಯ ಸೇವೆ ಉದ್ದೇಶದಿಂದ ತವರು ತಾಲೂಕಿನಲ್ಲೇ ನನ್ನ ಮಗಳು ಆರಂಭಿಸಿರುವ ಈ ಸೇವಾ ಮನೋಭಾವನೆ ಹಾಗೂ ವೃತ್ತಿ ರಂಗಕ್ಕೆ ಸರ್ವರ ಸಹಕಾರ ಅಗತ್ಯ ಎಂದರು.

ಉಚಿತವಾಗಿ ರಕ್ತದೊತ್ತಡ ಮತ್ತು ಮಧುಮೇಹ ತಪಾಸಣೆ

ಶಿಬಿರದಲ್ಲಿ ಸಾರ್ವಜನಿಕರಿಗೆ ಉಚಿತವಾಗಿ ರಕ್ತದೊತ್ತಡ ಮತ್ತು ಮಧುಮೇಹ ತಪಾಸಣೆ ನಡೆಸಲಾಯಿತು ಹಾಗೂ ರಿಯಾಯಿತಿ ದರದಲ್ಲಿ ಔಷಧಿಗಳನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಶಿಲ್ಪಾ ನಾಯಕ, ಮಾಧವ ನಾಯಕ ಸುಪುತ್ರಿ ಯಶಸ್ವಿನಿ ನಾಯಕ ಸೇರಿದಂತೆ ಕುಟುಂಬ ವರ್ಗ, ಹಿತೈಷಿಗಳು, ಆಪ್ತರು,ಕ್ಲಿನಿಕ್ ಸಿಬ್ಬಂದಿಗಳಿದ್ದುವಿಶೇಷ ಶಿಬಿರದ ಯಶಸ್ಸಿಗೆ ಸಹಕರಿಸಿದರು. ಸ್ಥಳೀಯ ಆಟೋ ರಿಕ್ಷಾ ನಿಲ್ದಾಣದ ಚಾಲಕ ಹಾಗೂ ಮಾಲಕರು, ಇತರೆ ಸಾರ್ವಜನಿಕರು , ಮಹಿಳೆಯರು, ವೃದ್ಧರು, ಕೆಲ ವಿದ್ಯಾರ್ಥಿಗಳು ಸೇರಿದಂತೆ ಹಲವರು ಶಿಬಿರದ ಪ್ರಯೋಜನ ಪಡೆದುಕೊಂಡು, ಡಾ ಮಧುರಾ ನಾಯ್ಕ ಅವರ ಸೇವೆ ಬಗ್ಗೆ ಧನ್ಯತೆ ಸೂಚಿಸಿ ಶಿಬಿರದ ಆಯೋಜನೆ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು. ನಿಮ್ಮ ಮತ್ತು ನಿಮ್ಮ ಪ್ರೀತಿ ಪಾತ್ರರ ಆರೋಗ್ಯ ಭಾಗ್ಯ ಕಾಪಾಡಿಕೊಳ್ಳಲು ಮತ್ತು ವೃದ್ಧಿಸಿಕೊಂಡು ನೆಮ್ಮದಿ ಜೀವನ ಸಾಗಿಸಲು ಅಂಕೋಲಾದ ಪ್ರಸಿದ್ಧ ಆಯುಷ್ ಹೋಮಿಯೋಪತಿ ಕ್ಲಿನಿಕ್ ಗೆ ಭೇಟಿ ಮಾಡಿ, ಡಾ ಮಧುರಾ ನಾಯಕರ ಸಲಹೆ , ಚಿಕಿತ್ಸಾ ಸೇವೆ ಪಡೆದುಕೊಳ್ಳಬಹುದಾಗಿದೆ.


ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Share

📢 Stay Updated!

Join our official WhatsApp group to get instant news updates, alerts, and exclusive stories – right on your phone.

💬 Join our WhatsApp Group

Don't Miss

ಗೋಕರ್ಣಕ್ಕೆ ಆಗಮಿಸಲಿದೆ ವರದಹಳ್ಳಿಯ ಶ್ರೀಧರ ಸ್ವಾಮಿಗಳ ಪಾದುಕೆ: ದರ್ಶನ ಮತ್ತು ಫಲಸಮರ್ಪಣೆಗೆ ಸುವರ್ಣಾವಕಾಶ

ಗೋಕರ್ಣ: ವರದಹಳ್ಳಿಯ ಸದ್ಗುರು ಶ್ರೀಧರ ಸ್ವಾಮಿಗಳ ಪಾದುಕೆ ಇದೇ ಏಪ್ರಿಲ್ 8ರ ಬುಧರವಾರ ಮತ್ತು 9ರ ಗುರುವಾರ, 10ರ ಶುಕ್ರವಾರ ಶ್ರೀಕ್ಷೇತ್ರ ಗೋಕರ್ಣಕ್ಕೆ ಆಗಮಿಸಲಿದೆ. ಏಪ್ರಿಲ್ 9 ರಂದು ರಥಬೀದಿಯಲ್ಲಿರುವ ರಾಮಚಂದ್ರ...

ಬಂಗಾರಮಕ್ಕಿಯಲ್ಲಿ ‘ಪ್ರಾಚೀನ ಆರೋಗ್ಯ ಪರಂಪರಾ ವೈದ್ಯ ಸಂಗಮ

ಹೊನ್ನಾವರ: ರಾಜ್ಯದ ಪ್ರತಿ ಗ್ರಾಮದಲ್ಲಿ ಔಷಧಿ ಗಿಡಗಳ ಪಾರ್ಕ್ ನಿರ್ಮಾಣ ಮಾಡಲಾಗುವುದು ಎಂದು ವಡ್ನಾಳ್ ಜಗದೀಶ್ ರವರು ಹೊನ್ನಾವರ ತಾಲೂಕಿನ ಬಂಗಾರಮಕ್ಕಿಯಲ್ಲಿ ‘ಪ್ರಾಚೀನ ಆರೋಗ್ಯ ಪರಂಪರಾ ವೈದ್ಯ ಸಂಗಮ’ ದಲ್ಲಿ ಹೇಳಿದರು....

🌐 📺 Visit Our Media Partner Site

ಉತ್ತರಕನ್ನಡ ಸುದ್ದಿ Update ಪಡೆಯಿರಿ

🔗 Go to Vismaya TV
Related Articles

ಗೋಕರ್ಣಕ್ಕೆ ಆಗಮಿಸಲಿದೆ ವರದಹಳ್ಳಿಯ ಶ್ರೀಧರ ಸ್ವಾಮಿಗಳ ಪಾದುಕೆ: ದರ್ಶನ ಮತ್ತು ಫಲಸಮರ್ಪಣೆಗೆ ಸುವರ್ಣಾವಕಾಶ

ಗೋಕರ್ಣ: ವರದಹಳ್ಳಿಯ ಸದ್ಗುರು ಶ್ರೀಧರ ಸ್ವಾಮಿಗಳ ಪಾದುಕೆ ಇದೇ ಏಪ್ರಿಲ್ 8ರ ಬುಧರವಾರ ಮತ್ತು 9ರ...

ವಿಸ್ಮಯ ಟಿ.ವಿ ಹೆಸರಿನಲ್ಲಿ ಮೋಸ: ವೀಕ್ಷಕರ, ಜಾಹೀರಾತುದಾರರ ಗಮನಕ್ಕೆ

ಕುಮಟಾ: ಕಳೆದ 13 ವರ್ಷಗಳಿಂದ ಸದಭಿರುಚಿಯ ಕಾರ್ಯಕ್ರಮಗಳ ಮೂಲಕ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಮನೆಮಾತಾಗಿರುವ ವಿಸ್ಮಯ...

ಫೋಟೋಗ್ರಾಫರ್ ಪ್ರಶಾಂತ ವಿಧಿವಶ : ಪಚ್ಚು ಎಂದೇ ಚಿರಪರಿಚಿತನಾಗಿದ್ದ ಯುವಕ ಇನ್ನು ನೆನಪು ಮಾತ್ರ

ಅಂಕೋಲಾ : ಪಟ್ಟಣ ವ್ಯಾಪ್ತಿಯ ಲಕ್ಷ್ಮೇಶ್ವರ ಕುಂಬಾರಕೇರಿ ನಿವಾಸಿ, ಪ್ರಶಾಂತ (ಪಚ್ಚು ) ಕೆ ನಾಯ್ಕ...

ತರಂಗ ಎಲೆಕ್ಟ್ರಾನಿಕ್ಸ್ ನಲ್ಲಿ ಯುಗಾದಿ ಉತ್ಸವ: ಏ.ಸಿ ಮೇಲೆ ಬಂಪರ್ ಆಫರ್

ಕುಮಟಾ: ಉತ್ತರಕನ್ನಡ ಜಿಲ್ಲೆಯ ಅತ್ಯಂತ ವಿಶ್ವಾಸಾರ್ಹ ಮತ್ತು ಅತಿದೊಡ್ಡ ಶೋರೂಮ್ ತರಂಗ ಎಲೆಕ್ಟ್ರಾನಿಕ್ಸ್ ನಲ್ಲಿ ಯುಗಾದಿ...

ನರ್ಸ್ ವೃತ್ತಿ ಮತ್ತು ಕುಟುಂಬ ಜವಾಬ್ದಾರಿಗಳ ನಡುವೆಯೇ ಸಾಧನೆ ಮಾಡಿದ ಪೂಜಾ ನಾಯ್ಕ

ಕುಮಟಾ :- ತಾಲೂಕಿನ ಕಲಭಾಗ ಗ್ರಾಮ ನಿವಾಸಿ ಪೂಜಾ ಸಂತೋಷ ನಾಯ್ಕ ಅವರು 2024–26ನೇ ಸಾಲಿನ...

ಕಲೆ ಆತ್ಮ ಗೌರವದ ಸಂಕೇತ: ಮಂಕಾಳು ವೈದ್ಯ

ಮುರುಡೇಶ್ವರ: ಮುರುಡೇಶ್ವರದ ಯಕ್ಷರಕ್ಷೆ ವೇದಿಕೆಯಲ್ಲಿ ರಾಗಶ್ರೀ ಸಂಗೀತ ವಿದ್ಯಾಲಯ ಹಡಿನಬಾಳ ಇದರ ಮುರುಡೇಶ್ವರ ಶಾಖೆಯ ಪ್ರಥಮ...

ಬಡ, ಮಧ್ಯಮವರ್ಗ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಒಟ್ಟು 3 ಕೋಟಿ ಮೌಲ್ಯದ ವಿದ್ಯಾರ್ಥಿವೇತನ

ಉಡುಪಿ: ರಾಜ್ಯದಲ್ಲೇ ಪ್ರಸಿದ್ಧ ಪಡೆದ ಉಡುಪಿ ಲಾರ್ಡ್ಸ್ ಇಂಟರ್‌ನ್ಯಾಷನಲ್ ರೆಸಿಡೆನ್ಷಿಯಲ್ ಸ್ಕೂಲ್ , ಬಡ, ಮಧ್ಯಮವರ್ಗ...