ಸಿಂಧೂರ ಗಣಪತಿ ಮೂರ್ತಿ ಅಂಕೋಲಾ ವೆಂಕಟರಮಣ ದೇವಾಲಯ
Important

ಬಲು ಅಪರೂಪ ಕೆಂಪು ಬಣ್ಣದ ಈ ಸಿಂಧೂರ ಗಣಪ: ದರ್ಶನ ಮಾತ್ರದಿಂದಲೇ ಪರಿಹಾರವಾಗುವುದಂತೆ ಜನ್ಮಾಂತರಗಳ ಪಾಪ

Share

ಅಂಕೋಲಾ: ವಿಶ್ವದಾದ್ಯಂತ ಪ್ರಥಮ ಪೂಜಿತ, ಏಕದಂತನ ಆರಾಧನೆ ಜೋರಾಗಿ ನಡೆದಿದ್ದು ಚೌತಿಯ ಸಂಭ್ರಮ ಎಲ್ಲೆಡೆ ಕಂಡುಬರುತ್ತಿದೆ. ಈ ನಡುವೆ ಅಂಕೋಲಾ ತಾಲೂಕಿನ ಸಾರ್ವಜನಿಕ ಗಣಪತಿಗಳಲ್ಲಿ ಮೊದಲ ಗಣಪ ಎನ್ನುವ ಪ್ರಸಿದ್ಧಿ ಪಡೆದಿರುವುದು ದೊಡ್ಡ ದೇವರೆಂದೇ ಖ್ಯಾತಿ ಪಡೆದಿರುವ ಶ್ರೀ ವೆಂಕಟರಮಣ ದೇವಾಲಯದ ಸನ್ನಿಧಿಯಲ್ಲಿ ಪ್ರತಿಷ್ಠಾಪಿಸಿದ ಮಹಾ ಗಣಪತಿಗೆ ಸಲ್ಲುತ್ತದೆ. ಕೇವಲ ಪ್ರಥಮ ಪೂಜಿತ ಎಂದಷ್ಟೇ ಅಲ್ಲದೇ ಈ ಗಣಪ ಭಕ್ತರ ಪಾಲಿನ ಇಷ್ಟಾರ್ಥ ಕರುಣಿಸುವ ಮಹಾ ಮಹಿಮನೂ ಹೌದು.

ಸಿಂಧೂರ ಗಣಪತಿ: ಪುರಾತನ ಸಂಪ್ರದಾಯ

ಸಾಮಾನ್ಯವಾಗಿ ಗಣಪತಿಗೆ ಕೆಂಪು ಬಣ್ಣ ಮತ್ತು ಗರಿಕೆ ಎಂದರೆ ಬಲು ಪ್ರೀತಿ ಎನ್ನುವುದು ಹಲವು ಭಕ್ತರಿಗೆ ತಿಳಿದಿರುವ ವಿಚಾರ . ಆದರೆ ಇಲ್ಲಿ ಆಧುನಿಕತೆಯ ಈ ದಿನಗಳಲ್ಲಿಯೂ ಈಗಲೂ ಮಣ್ಣಿನಿಂದಲೇ ಮೂರ್ತಿ ತಯಾರಿಸುತ್ತಿರುವುದು ಒಂದು ವಿಶೇಷವಾದರೆ, ಮಂಗಲ ಮೂರ್ತಿ ಕೆಂಪು ಬಣ್ಣದಿಂದ ಕಂಗೊಳಿಸುವುದು ಇನ್ನೊಂದು ವಿಶೇಷ. ಅದಕ್ಕೆ ಇದನ್ನು ಸಿಂಧೂರ ಗಣಪತಿಯೆಂದು ಕರೆದು ವಿಶೇಷ ಪೂಜೆ ಸಲ್ಲಿಸಲಾಗುತ್ತದೆ.

ಅಂಕೋಲಾ ತಾಲೂಕಿನಲ್ಲಿ ಸಾರ್ವಜನಿಕವಾಗಿ ಪೂಜಿಸಿ ಆರಾದಿಸಲ್ಪಟ್ಟ ಪ್ರಪ್ರಥಮ ಗಣಪತಿ ಎಂದೇ ಖ್ಯಾತಿ ಪಡೆದಿರುವ ಸಿಂಧೂರ ಗಣಪತಿಯನ್ನು 1880 ರಲ್ಲೇ ಪ್ರತಿಷ್ಠಾಪಿಸಿ ಪೂಜಿಸುವ ಪದ್ಧತಿ ಆರಂಭವಾಗಿದ್ದು, ಇಂದಿಗೂ ಸಹ ಈ ಗಣಪತಿ ತಯಾರಿಸಲು ಮಣ್ಣು ಪೂರೈಕೆ ಸೇರಿದಂತೆ ಗಣೇಶನ ಹಬ್ಬದ ಸಂದರ್ಭದ ವಿವಿಧ ಸೇವೆಗಳನ್ನು ತಾಲೂಕಿನ ವಿವಿಧ ಸಮಾಜಗಳ ಜನರು ನೆರವೇರಿಸುತ್ತಾ ಬಂದಿದ್ದು ನೂರಾರು ವರ್ಷಗಳ ಪುರಾತನ ಧಾರ್ಮಿಕ ಪರಂಪರೆ ಮುಂದುವರೆಸಿಕೊಂಡು ಬರಲಾಗುತ್ತಿದೆ.

ಮೂಲ ನಕ್ಷತ್ರ ದಿನದಂದೇ ವಿಸರ್ಜನೆ

ಚೌತಿಯಂದು ಪ್ರತಿಷ್ಠಾಪನೆ ಗೊಳ್ಳುವ ಸಾರ್ವಜನಿಕ ಗಣೇಶ ಮೂರ್ತಿಗಳನ್ನು ಸಾಮಾನ್ಯವಾಗಿ 5 ದಿನಗಳ ನಂತರ ಹಂತ ಹಂತವಾಗಿ ಅನಂತ ಲೋಪಿ ವರೆಗೆ ಬೇರೆ ಬೇರೆ ಕಡೆ ಬೇರೆ ಬೇರೆ ದಿನಗಳಂದು ವಿಸರ್ಜಿಸಲಾಗುತ್ತದೆ. ಆದರೆ ದೊಡ್ಡ ದೇವರ ಸನ್ನಿಧಿಯಲ್ಲಿ ಪ್ರತಿಷ್ಠಾಪಿಸುವ ಗಣಪನಿಗೆ ದಿನದ ಲೆಕ್ಕ ಮಾಡದೇ, ಮೂಲ ನಕ್ಷತ್ರದ ದಿನದಂದೇ ವಿಸರ್ಜನೆ ನಡೆಸುವುದು ಇದರ ಇನ್ನೊಂದು ವಿಶೇಷ.

ತಾಲೂಕಿನ ಜನರು ಗಣೇಶ ಚೌತಿಯ ಸಂದರ್ಭದಲ್ಲಿ ವೆಂಕಟರಮಣ ದೇವಾಲಯಕ್ಕೆ ಆಗಮಿಸಿ ಸಿಂಧೂರ ಗಣಪತಿ ದರ್ಶನ ಪಡೆದು ತಮ್ಮ ಇಷ್ಟಾರ್ಥ ಸಿದ್ಧಿಗೆ ಪ್ರಾರ್ಥಿಸಿ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. ಕೆಂಪು ಗಣಪನ ದರ್ಶನ ಭಾಗ್ಯದಿಂದಲೇ ಜನ್ಮ -ಜನ್ಮಾಂತರಗಳ ಸಕಲ ಪಾಪ ಪರಿಹಾರವಾಗುವುದೆಂಬ ನಂಬಿಕೆ ಹಲವು ಭಕ್ತರಲ್ಲಿದೆ. ಗರಿಕೆ ಸೇವೆ ನೀಡಿದರೂ ಸಂತೃಪ್ತನಾಗುವ ಸಿಂಧೂರ ಮಹಾಗಣಪ ಭಕ್ತರ ಕಷ್ಟ ಕಾರ್ಪಣ್ಯ ದೂರ ಮಾಡುವನೆಂಬ ನಂಬಿಕೆ ಇದೆ.

ಭವ್ಯ ಮೆರವಣಿಗೆ – ಭಕ್ತರ ಉತ್ಸಾಹ

ಮೂಲ ನಕ್ಷತ್ರ ದಿನದಂದು ಮಂಗಲಮೂರ್ತಿಯನ್ನು ದೇವರ ಪ್ರತಿಷ್ಠಾ ಪೀಠದಿಂದ ವಿಸರ್ಜಿಸಿ, ದೇಗುಲ ಹೊರ ಆವರಣದಲ್ಲಿ ಮೆರವಣಿಗೆ ಪೀಠದಲ್ಲಿ ಕುಳ್ಳಿರಿಸಿ, ಪಲ್ಲಕಿ ಸೇವೆಯಂತೆ ನೂರಾರು ಭಕ್ತರು ಹೆಗಲ ಮೇಲೆ ಹೊತ್ತು ಸಾಗಿಸಿದರು. ಶ್ರೀ ದೇವರ ರಥಬೀದಿ, ಕಣಕಣೇಶ್ವರ ದೇಗುಲ, ದುರ್ಗಾ ಮಂದಿರದ ಎದುರಿನಿಂದ ಪಟ್ಟಣದ ಮುಖ್ಯ ರಸ್ತೆಯಲ್ಲಿ ಸಾಗಿ ಬಂದ ಗಣನಾಯಕನ ವಿಸರ್ಜನಾ ಮೆರವಣಿಗೆ ಬಂಡಿ ಭಜಾರದಲ್ಲಿ ಪ್ರತಿಷ್ಠಾಪಿಸಿದ ಗಣೇಶ ಮೂರ್ತಿ ಸನ್ನಿಧಿ ಹತ್ತಿರದ ಮಾರ್ಗವಾಗಿ ಶ್ರೀ ನರಸಿಂಹ ದೇವಸ್ಥಾನದ ಎದುರಿಂದ ಕೇಣಿ ಹಳ್ಳದತ್ತ ಆಗಮಿಸಿತು.

ಇದನ್ನೂ ಓದಿ: ಐತಿಹಾಸಿಕ ಚಂದ್ರಗ್ರಹಣ: ಆರಂಭ-ಮುಕ್ತಾಯ: ಚಂದ್ರಗ್ರಹಣ ಕುರಿತ ಸಾಮಾನ್ಯ ಪ್ರಶ್ನೆಗಳಿಗೆ ಉತ್ತರ

ದಾರಿಯುದ್ಧಕ್ಕೂ ಹಲವು ಭಕ್ತರು ಆರತಿ, ಹಣ್ಣು -ಕಾಯಿ , ಹೂವು ಸೇವೆ ನೆರವೇರಿಸಿದರು. ಕೇಣಿ ಹಳ್ಳದ ಬಳಿ ಮಂಗಲ ಮೂರ್ತಿ ಅಭರಣಗಳನ್ನು ತೆಗೆದು, ವಿಶೇಷ ಪೂಜೆ ಸಲ್ಲಿಸಿ ಹರಿವ ನೀರಿನಲ್ಲಿ ಗಣಪವನ್ನು ಹೊತ್ತೊಯ್ದು ವಿಸರ್ಜಿಸಲಾಯಿತು. ಬಪ್ಪಾ ಮೋರಯಾ ಎನ್ನುತ್ತಾ ಭಕ್ತರು ಕೆಂಪು ಗಣಪನಿಗೆ ಕೈ ಮುಗಿದು ಈ ವರ್ಷದ ಶುಭ ವಿದಾಯ ಹೇಳಿದರು. ಕೇಣಿ ಹಳ್ಳದ ಸೇತುವೆ ಮತ್ತು ಅಕ್ಕ ಪಕ್ಕದ ಪ್ರದೇಶಗಳಲ್ಲಿ ನೂರಾರು ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡು ಪುನೀತರಾದರು,

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Share

📢 Stay Updated!

Join our official WhatsApp group to get instant news updates, alerts, and exclusive stories – right on your phone.

💬 Join our WhatsApp Group

Don't Miss

ಗೋಕರ್ಣಕ್ಕೆ ಆಗಮಿಸಲಿದೆ ವರದಹಳ್ಳಿಯ ಶ್ರೀಧರ ಸ್ವಾಮಿಗಳ ಪಾದುಕೆ: ದರ್ಶನ ಮತ್ತು ಫಲಸಮರ್ಪಣೆಗೆ ಸುವರ್ಣಾವಕಾಶ

ಗೋಕರ್ಣ: ವರದಹಳ್ಳಿಯ ಸದ್ಗುರು ಶ್ರೀಧರ ಸ್ವಾಮಿಗಳ ಪಾದುಕೆ ಇದೇ ಏಪ್ರಿಲ್ 8ರ ಬುಧರವಾರ ಮತ್ತು 9ರ ಗುರುವಾರ, 10ರ ಶುಕ್ರವಾರ ಶ್ರೀಕ್ಷೇತ್ರ ಗೋಕರ್ಣಕ್ಕೆ ಆಗಮಿಸಲಿದೆ. ಏಪ್ರಿಲ್ 9 ರಂದು ರಥಬೀದಿಯಲ್ಲಿರುವ ರಾಮಚಂದ್ರ...

ಬಂಗಾರಮಕ್ಕಿಯಲ್ಲಿ ‘ಪ್ರಾಚೀನ ಆರೋಗ್ಯ ಪರಂಪರಾ ವೈದ್ಯ ಸಂಗಮ

ಹೊನ್ನಾವರ: ರಾಜ್ಯದ ಪ್ರತಿ ಗ್ರಾಮದಲ್ಲಿ ಔಷಧಿ ಗಿಡಗಳ ಪಾರ್ಕ್ ನಿರ್ಮಾಣ ಮಾಡಲಾಗುವುದು ಎಂದು ವಡ್ನಾಳ್ ಜಗದೀಶ್ ರವರು ಹೊನ್ನಾವರ ತಾಲೂಕಿನ ಬಂಗಾರಮಕ್ಕಿಯಲ್ಲಿ ‘ಪ್ರಾಚೀನ ಆರೋಗ್ಯ ಪರಂಪರಾ ವೈದ್ಯ ಸಂಗಮ’ ದಲ್ಲಿ ಹೇಳಿದರು....

🌐 📺 Visit Our Media Partner Site

ಉತ್ತರಕನ್ನಡ ಸುದ್ದಿ Update ಪಡೆಯಿರಿ

🔗 Go to Vismaya TV
Related Articles

ಹೋಮಿಯೋಪತಿ ಸಂಸ್ಥಾಪಕ ಹಾನಿಮ್ಯಾನ್ ಅವರ 271ನೇ ಜನ್ಮ ದಿನಾಚರಣೆ

ಅಂಕೋಲಾ: ಇಂಗ್ಲಿಷ್ ಔಷಧಿಗಳನ್ನು ಸೇವಿಸಿದಾಗ ತಾತ್ಕಾಲಿಕವಾಗಿ ಕಾಯಿಲೆ ವಾಸಿಯಾದಂತೆ ಅನ್ನಿಸಿದರೂ, ಕೆಲವೇ ದಿನಗಳಲ್ಲಿ ಅದು ಮರುಕಳಿಸುವ...

ಗೋಕರ್ಣಕ್ಕೆ ಆಗಮಿಸಲಿದೆ ವರದಹಳ್ಳಿಯ ಶ್ರೀಧರ ಸ್ವಾಮಿಗಳ ಪಾದುಕೆ: ದರ್ಶನ ಮತ್ತು ಫಲಸಮರ್ಪಣೆಗೆ ಸುವರ್ಣಾವಕಾಶ

ಗೋಕರ್ಣ: ವರದಹಳ್ಳಿಯ ಸದ್ಗುರು ಶ್ರೀಧರ ಸ್ವಾಮಿಗಳ ಪಾದುಕೆ ಇದೇ ಏಪ್ರಿಲ್ 8ರ ಬುಧರವಾರ ಮತ್ತು 9ರ...

ವಿಸ್ಮಯ ಟಿ.ವಿ ಹೆಸರಿನಲ್ಲಿ ಮೋಸ: ವೀಕ್ಷಕರ, ಜಾಹೀರಾತುದಾರರ ಗಮನಕ್ಕೆ

ಕುಮಟಾ: ಕಳೆದ 13 ವರ್ಷಗಳಿಂದ ಸದಭಿರುಚಿಯ ಕಾರ್ಯಕ್ರಮಗಳ ಮೂಲಕ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಮನೆಮಾತಾಗಿರುವ ವಿಸ್ಮಯ...

ಫೋಟೋಗ್ರಾಫರ್ ಪ್ರಶಾಂತ ವಿಧಿವಶ : ಪಚ್ಚು ಎಂದೇ ಚಿರಪರಿಚಿತನಾಗಿದ್ದ ಯುವಕ ಇನ್ನು ನೆನಪು ಮಾತ್ರ

ಅಂಕೋಲಾ : ಪಟ್ಟಣ ವ್ಯಾಪ್ತಿಯ ಲಕ್ಷ್ಮೇಶ್ವರ ಕುಂಬಾರಕೇರಿ ನಿವಾಸಿ, ಪ್ರಶಾಂತ (ಪಚ್ಚು ) ಕೆ ನಾಯ್ಕ...

ತರಂಗ ಎಲೆಕ್ಟ್ರಾನಿಕ್ಸ್ ನಲ್ಲಿ ಯುಗಾದಿ ಉತ್ಸವ: ಏ.ಸಿ ಮೇಲೆ ಬಂಪರ್ ಆಫರ್

ಕುಮಟಾ: ಉತ್ತರಕನ್ನಡ ಜಿಲ್ಲೆಯ ಅತ್ಯಂತ ವಿಶ್ವಾಸಾರ್ಹ ಮತ್ತು ಅತಿದೊಡ್ಡ ಶೋರೂಮ್ ತರಂಗ ಎಲೆಕ್ಟ್ರಾನಿಕ್ಸ್ ನಲ್ಲಿ ಯುಗಾದಿ...

ನರ್ಸ್ ವೃತ್ತಿ ಮತ್ತು ಕುಟುಂಬ ಜವಾಬ್ದಾರಿಗಳ ನಡುವೆಯೇ ಸಾಧನೆ ಮಾಡಿದ ಪೂಜಾ ನಾಯ್ಕ

ಕುಮಟಾ :- ತಾಲೂಕಿನ ಕಲಭಾಗ ಗ್ರಾಮ ನಿವಾಸಿ ಪೂಜಾ ಸಂತೋಷ ನಾಯ್ಕ ಅವರು 2024–26ನೇ ಸಾಲಿನ...

ಕಲೆ ಆತ್ಮ ಗೌರವದ ಸಂಕೇತ: ಮಂಕಾಳು ವೈದ್ಯ

ಮುರುಡೇಶ್ವರ: ಮುರುಡೇಶ್ವರದ ಯಕ್ಷರಕ್ಷೆ ವೇದಿಕೆಯಲ್ಲಿ ರಾಗಶ್ರೀ ಸಂಗೀತ ವಿದ್ಯಾಲಯ ಹಡಿನಬಾಳ ಇದರ ಮುರುಡೇಶ್ವರ ಶಾಖೆಯ ಪ್ರಥಮ...