Important

ನರ್ಸ್ ವೃತ್ತಿ ಮತ್ತು ಕುಟುಂಬ ಜವಾಬ್ದಾರಿಗಳ ನಡುವೆಯೇ ಸಾಧನೆ ಮಾಡಿದ ಪೂಜಾ ನಾಯ್ಕ

Share

ಕುಮಟಾ :- ತಾಲೂಕಿನ ಕಲಭಾಗ ಗ್ರಾಮ ನಿವಾಸಿ ಪೂಜಾ ಸಂತೋಷ ನಾಯ್ಕ ಅವರು 2024–26ನೇ ಸಾಲಿನ ಪೋಸ್ಟ್ ಬೇಸಿಕ್ ಬಿ.ಎಸ್‌.ಸಿ ನರ್ಸಿಂಗ್ (P.B.B.Sc Nursing) ಕೋರ್ಸ್ ಅನ್ನು ಶೇಕಡಾ 72 ಅಂಕಗಳೊಂದಿಗೆ ಯಶಸ್ವಿಯಾಗಿ ಉತ್ತೀರ್ಣರಾಗಿದ್ದಾರೆ. ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಅಧೀನದಲ್ಲಿ ನಡೆದ ಈ ಕೋರ್ಸ್‌ನಲ್ಲಿ ವಿಶ್ವವಿದ್ಯಾಲಯ ಮಟ್ಟದ ಪ್ರಥಮ ರ್ಯಾಂಕ್ ಪಡೆದ ಅಭ್ಯರ್ಥಿಗಿಂತ ಕೇವಲ 20 ಅಂಕಗಳಷ್ಟನ್ನು ಮಾತ್ರ ಕಡಿಮೆ ಪಡೆದಿರುವುದು ಇವರ ಗಮನಾರ್ಹ ಸಾಧನೆಯಾಗಿದೆ.

ಮೂಲತಃ ಶಿರಸಿಯ ಗಣೇಶನಗರ ನಿವಾಸಿಗಳಾದ ಟೇಲರಿಂಗ್ ವೃತ್ತಿಯ ರವಿಕಾಂತ ಹಾಗೂ ಶ್ರೀಮತಿ ಕಲಾವತಿ ದಂಪತಿಗಳ ಪುತ್ರಿಯಾಗಿರುವ ಪೂಜಾ ನಾಯ್ಕ ಅವರು ಶಿರಸಿಯಲ್ಲಿ ಪಿ.ಯೂ.ಸಿ.ಮುಗಿಸಿ, 2016 ರಲ್ಲಿ ಹೊನ್ನಾವರದ ಸೆಂಟ್ ಇಗ್ನೇಷಿಯಸ್ ಇನ್ಸ್ಟಿಟ್ಯೂಟ್ ಆಫ್ ಹೆಲ್ತ್ ಸೈನ್ಸ್‌ನಲ್ಲಿ ಮೂರು ವರ್ಷಗಳ ಜಿ.ಎನ್.ಎಮ್ ನರ್ಸಿಂಗ್ ಕೋರ್ಸ್ ಪೂರ್ಣಗೊಳಿಸಿದ್ದರು.ಅದೇ ವರ್ಷ ಕುಮಟಾ ತಾಲೂಕಿನ ಕಲಭಾಗ ನಿವಾಸಿ ಹಾಗೂ ಟೆಂಪೋ ಮಾಲಕರಾಗಿರುವ ಸಂತೋಷ ಎನ್. ನಾಯ್ಕ ಅವರೊಂದಿಗೆ ವಿವಾಹವಾದರು.

ತಾವು ವಿದ್ಯಾಭ್ಯಾಸ ಮಾಡಿದ ಸಂಸ್ಥೆಯಲ್ಲೇ ಮೂರು ವರ್ಷಗಳ ಕಾಲ ನರ್ಸ್ ಆಗಿ ಸೇವೆ ಸಲ್ಲಿಸಿದ್ದ ಅವರು ಕಳೆದ ಐದು ವರ್ಷಗಳಿಂದ ಕುಮಟಾದ ಲಯನ್ಸ್ ರೇವಣಕರ ಚೆರಿಟೇಬಲ್ ಕಣ್ಣಿನ ಆಸ್ಪತ್ರೆಯಲ್ಲಿ ಸ್ಟಾಫ್ ನರ್ಸ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಕರ್ತವ್ಯನಿಷ್ಠೆ, ರೋಗಿಗಳ ಬಗ್ಗೆ ಕಾಳಜಿ ಹಾಗೂ ಸಹೋದ್ಯೋಗಿಗಳೊಂದಿಗೆ ಸೌಹಾರ್ದಯುತ ನಡೆ-ನುಡಿಗಳಿಂದ ಅವರು ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಎರಡನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಮಗ ‘ಚಿರಂಜೀವಿ’ಯ ಆರೈಕೆ, ಕುಟುಂಬದ ಜವಾಬ್ದಾರಿಗಳು ಹಾಗೂ ನರ್ಸ್ ವೃತ್ತಿಯನ್ನು ಸಮತೋಲನದಿಂದ ನಿಭಾಯಿಸುತ್ತಲೇ ಅವರು ಉಡುಪಿ ಜಿಲ್ಲೆಯ ಕಾಪುವಿನ ವಿದ್ಯಾ ಕಾಲೇಜ್ ಆಫ್ ನರ್ಸಿಂಗ್ ಮೂಲಕ ಬಾಹ್ಯ ಅಧ್ಯಯನದ ಮೂಲಕ ಎರಡು ವರ್ಷಗಳ ಪಿ.ಬಿ.ಬಿ.ಎಸ್‌ಸಿ ನರ್ಸಿಂಗ್ ಕೋರ್ಸ್ ಪೂರ್ಣಗೊಳಿಸಿದ್ದಾರೆ.
ಇತ್ತೀಚೆಗೆ ನಡೆದ ಪದವಿ ಪ್ರದಾನೋತ್ಸವದಲ್ಲಿ ಗಣ್ಯರ ಸಮ್ಮುಖದಲ್ಲಿ ಪದವಿ ಪ್ರಮಾಣಪತ್ರವನ್ನು ಸ್ವೀಕರಿಸಿದರು.

ಹೆಚ್ಚಿನ ವಿದ್ಯಾಭ್ಯಾಸ ಮಾಡುವ ಕನಸು ಹೊಂದಿದ್ದ ಪೂಜಾ ನಾಯ್ಕ ಅವರು ನರ್ಸಿಂಗ್ ಡಿಪ್ಲೊಮಾ ಪೂರೈಸಿದ ಅದೇ ವರ್ಷ ವಿವಾಹವಾದರೂ ತಮ್ಮ ಕನಸನ್ನು ಕೈಬಿಡದೇ ಹತ್ತು ವರ್ಷಗಳ ಬಳಿಕ ನರ್ಸಿಂಗ್ ಪದವಿ ಕೋರ್ಸನ್ನು ಉನ್ನತ ಅಂಕಗಳ ಪಡೆದು ತನ್ನ ಗುರಿಯನ್ನು ಸಾಧಿಸಿರುವುದು ಅವರ ದೃಢ ಸಂಕಲ್ಪಕ್ಕೆ ನಿದರ್ಶನವಾಗಿದೆ.

ತಾಯ್ತನ, ಕುಟುಂಬದ ಜವಾಬ್ದಾರಿ ಹಾಗೂ ನರ್ಸ್ ವೃತ್ತಿಯ ನಡುವೆಯೂ ವಿದ್ಯಾಭ್ಯಾಸ ಮುಂದುವರಿಸಿ ಸಾಧನೆ ಮಾಡಿದ ಪೂಜಾ ನಾಯ್ಕ ಅವರ ಪಯಣ ಇಂದಿನ ಯುವ ಮಹಿಳೆಯರಿಗೆ ಪ್ರೇರಣಾದಾಯಕವಾಗಿದೆ.

ವಿಸ್ಮಯ ನ್ಯೂಸ್, ಕುಮಟಾ

Share

📢 Stay Updated!

Join our official WhatsApp group to get instant news updates, alerts, and exclusive stories – right on your phone.

💬 Join our WhatsApp Group

Don't Miss

ಮೂಲ ಸ್ಥಳದಲ್ಲೇ ಮುರಿನಕಟ್ಟೆ ನಿರ್ಮಾಣಕ್ಕೆ ಯೋಜನೆ ಸಿದ್ಧ : ವಿಶ್ವೇಶ್ವರ ಹೆಗಡೆ ಕಾಗೇರಿ

ಭಟ್ಕಳ: ಹೆದ್ದಾರಿ ಪ್ರಾಧಿಕಾರ ಮುರಿನಕಟ್ಟೆಯನ್ನು ಮೂಲ ಜಾಗದಲ್ಲಿಯೇ ಕಟ್ಟಲು ತಿರ್ಮಾನಿಸಿ ಈ ಕುರಿತು ನೀಲನಕ್ಷೇಯನ್ನು ತಯಾರಿಸಲಾಗಿದೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು. ಈ ವಿಚಾರದ ಕುರಿತಂತೆ ಜಿಲ್ಲಾಡಳಿತ ಹಾಗೂ...

ಜಾನುವಾರು ರಕ್ಷಣೆ: ಗೋ ಶಾಲೆಗೆ ರವಾನಿಸುವ ಮೂಲಕ ಗೀರ್ ಹೋರಿಗಳಿಗೆ ಜೀವದಾನ

ಅಂಕೋಲಾ: ವಧೆ ಉದ್ದೇಶದಿಂದ ಹಿಂಸಾತ್ಮಕವಾಗಿ ಸಾಗಿಸುತ್ತಿದ್ದ, ಎರಡು ಭಾರೀ ಗಾತ್ರದ ಗೀರ್ ತಳಿಯ ಹೋರಿಗಳಿಗೆ ಕೊನೆಗೂ ಸುರಕ್ಷಿತ ಆಶ್ರಯ ದೊರೆತಂತಿದ್ದು, ಕುಮಟಾ ಉಪವಿಭಾಗಾಧಿಕಾರಿಗಳ ಅನುಮತಿ ಬಳಿಕ ಹೋರಿಗಳನ್ನು ಗೋಶಾಲೆಗೆ ಕಳಿಸಿ, ಮೂಕ...

🌐 📺 Visit Our Media Partner Site

ಉತ್ತರಕನ್ನಡ ಸುದ್ದಿ Update ಪಡೆಯಿರಿ

🔗 Go to Vismaya TV
Related Articles

ಪ್ರಗತಿ ವಿದ್ಯಾಲಯದಲ್ಲಿ ಶಾಲಾ ಪ್ರಾರಂಭೋತ್ಸವ; ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ

ಕುಮಟಾ: ಮೂರೂರಿನ ಪ್ರಗತಿ ವಿದ್ಯಾಲಯದಲ್ಲಿ 2026-27ನೇ ಸಾಲಿನ ಶೈಕ್ಷಣಿಕ ವರ್ಷದ ಪ್ರಾರಂಭೋತ್ಸವ ಅತ್ಯಂತ ವಿಜೃಂಭಣೆಯಿoದ ನೆರವೇರಿತು....

ಬಿಜಿಎಸ್ ಸೆಂಟ್ರಲ್ ಸ್ಕೂಲ್ & ಪಿಯು ಕಾಲೇಜಿನಲ್ಲಿ ನೇಮಕಾತಿ: ಕೂಡಲೇ ಸಂಪರ್ಕಿಸಿ

ಉತ್ತರಕನ್ನಡ ಜಿಲ್ಲೆಯ ಮಿರ್ಜಾನಿನ ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಬಿಜಿಎಸ್ ಸೆಂಟ್ರಲ್ ಸ್ಕೂಲ್ & ಆದಿಚುಂಚನಗಿರಿ...

ಅಂಕೋಲಾದಬಾಳೇಗುಳಿ ಬೊಗ್ರಿಬೈಲಿನಲ್ಲಿ ಶ್ರೀ ಉದ್ಭವ ನಾಗಚೌಡೇಶ್ವರಿ–ವೀರಾಂಜನೇಯ ದೇವರ ಚತುರ್ಥ ವರ್ಧಂತಿ ಮಹೋತ್ಸವ

ಅಂಕೋಲಾ: ತಾಲೂಕಿನ ಬಾಳೇಗುಳಿ ಬೊಗ್ರಿಬೈಲಿನಲ್ಲಿರುವ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಶ್ರೀ ಉದ್ಭವ ನಾಗಚೌಡೇಶ್ವರಿ ಅಮ್ಮನವರು ಹಾಗೂ...

ಹೋಮಿಯೋಪತಿ ಸಂಸ್ಥಾಪಕ ಹಾನಿಮ್ಯಾನ್ ಅವರ 271ನೇ ಜನ್ಮ ದಿನಾಚರಣೆ

ಅಂಕೋಲಾ: ಇಂಗ್ಲಿಷ್ ಔಷಧಿಗಳನ್ನು ಸೇವಿಸಿದಾಗ ತಾತ್ಕಾಲಿಕವಾಗಿ ಕಾಯಿಲೆ ವಾಸಿಯಾದಂತೆ ಅನ್ನಿಸಿದರೂ, ಕೆಲವೇ ದಿನಗಳಲ್ಲಿ ಅದು ಮರುಕಳಿಸುವ...

ಗೋಕರ್ಣಕ್ಕೆ ಆಗಮಿಸಲಿದೆ ವರದಹಳ್ಳಿಯ ಶ್ರೀಧರ ಸ್ವಾಮಿಗಳ ಪಾದುಕೆ: ದರ್ಶನ ಮತ್ತು ಫಲಸಮರ್ಪಣೆಗೆ ಸುವರ್ಣಾವಕಾಶ

ಗೋಕರ್ಣ: ವರದಹಳ್ಳಿಯ ಸದ್ಗುರು ಶ್ರೀಧರ ಸ್ವಾಮಿಗಳ ಪಾದುಕೆ ಇದೇ ಏಪ್ರಿಲ್ 8ರ ಬುಧರವಾರ ಮತ್ತು 9ರ...

ವಿಸ್ಮಯ ಟಿ.ವಿ ಹೆಸರಿನಲ್ಲಿ ಮೋಸ: ವೀಕ್ಷಕರ, ಜಾಹೀರಾತುದಾರರ ಗಮನಕ್ಕೆ

ಕುಮಟಾ: ಕಳೆದ 13 ವರ್ಷಗಳಿಂದ ಸದಭಿರುಚಿಯ ಕಾರ್ಯಕ್ರಮಗಳ ಮೂಲಕ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಮನೆಮಾತಾಗಿರುವ ವಿಸ್ಮಯ...

ಫೋಟೋಗ್ರಾಫರ್ ಪ್ರಶಾಂತ ವಿಧಿವಶ : ಪಚ್ಚು ಎಂದೇ ಚಿರಪರಿಚಿತನಾಗಿದ್ದ ಯುವಕ ಇನ್ನು ನೆನಪು ಮಾತ್ರ

ಅಂಕೋಲಾ : ಪಟ್ಟಣ ವ್ಯಾಪ್ತಿಯ ಲಕ್ಷ್ಮೇಶ್ವರ ಕುಂಬಾರಕೇರಿ ನಿವಾಸಿ, ಪ್ರಶಾಂತ (ಪಚ್ಚು ) ಕೆ ನಾಯ್ಕ...

ತರಂಗ ಎಲೆಕ್ಟ್ರಾನಿಕ್ಸ್ ನಲ್ಲಿ ಯುಗಾದಿ ಉತ್ಸವ: ಏ.ಸಿ ಮೇಲೆ ಬಂಪರ್ ಆಫರ್

ಕುಮಟಾ: ಉತ್ತರಕನ್ನಡ ಜಿಲ್ಲೆಯ ಅತ್ಯಂತ ವಿಶ್ವಾಸಾರ್ಹ ಮತ್ತು ಅತಿದೊಡ್ಡ ಶೋರೂಮ್ ತರಂಗ ಎಲೆಕ್ಟ್ರಾನಿಕ್ಸ್ ನಲ್ಲಿ ಯುಗಾದಿ...