ಅಂಕೋಲಾ: ಜಿಲ್ಲೆಯ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳೇ , ಶೈಕ್ಷಣಿಕ ಸಾಲಿನ ನೈಜ ವಾರ್ಷಿಕ ಪರೀಕ್ಷೆಗೆ ಮುನ್ನ , ನೀವು ಒಂದು ಖಾಸಗೀ ಕಿರು ಪರೀಕ್ಷೆ ಎದುರಿಸಲು ಮನಸ್ಸು ಮಾಡುತ್ತೀರಾ ? ಹಾಗಿದ್ದರೆ ನಿಮಗಿದೆ ಒಂದು ಸುವರ್ಣ ಅವಕಾಶ. ಹಾಗಂತ ಇದು ಬೇರೆಯವರ ಜೊತೆ ಪ್ರಬಲ ಸ್ಪರ್ಧೆ ಅಲ್ಲ, ನಿಮ್ಮ ಜೊತೆ ನೀವೇ ಮಾಡಿಕೊಳ್ಳಬಹುದಾದ ಸ್ಪ ಸಾಮರ್ಥ್ಯ ಪರೀಕ್ಷೆ ಎಂದು ಕೊಳ್ಳಲೂ ಬಹುದು.
ನಿಮ್ಮಲ್ಲಿ ಎಷ್ಟು ಪ್ರತಿಭೆ ಇದೆ, ಅರ್ಹತೆ ಇದೆ : ಈಗಾಗಲೇ ನೀವು ಎಷ್ಟು ಓದಿದ್ದೀರಿ, ನೀವು ಎಷ್ಟು ಮುಂದೆ ಹೋಗಬಹುದು ಅನ್ನೋದನ್ನ ನೀವೇ ತಿಳಿದುಕೊಳ್ಳಲು ಜಿಲ್ಲೆಯ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ, ಅಂಕೋಲಾದ ಪೂಜಗೇರಿಯಲ್ಲಿರುವ, ಹಿಮಾಲಯ ಪದವಿ ಪೂರ್ವ ಕಾಲೇಜು ಒಂದು ಒಳ್ಳೆಯ ಅವಕಾಶ ಒದಗಿಸಿ ಕೊಡುತ್ತಿದೆ.
ನವೆಂಬರ್ 29, ರವಿವಾರ ಬೆಳಿಗ್ಗೆ 10 ಗಂಟೆಗೆ – ಹಿಮಾಲಯ ಕಾಲೇಜಿನಲ್ಲಿ ಪ್ರತಿಭಾನ್ವೇಷಣೆ ಪರೀಕ್ಷೆ!
ಗೆಲ್ಲುವ ಅವಕಾಶ ಇದೆ!
ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಮೂವರಿಗೆ ಕ್ರಮವಾಗಿ ಶುಲ್ಕದಲ್ಲಿ ಶೇಕಡ 100%, 50% ಮತ್ತು 25% ರಿಯಾಯಿತಿ ಸಿಗುತ್ತೆ.
ಪ್ರತಿಭಾನ್ವಿತ ಹಾಗೂ ಆರ್ಥಿಕ ಅನಾನುಕೂಲತೆ ಇರುವ 10 ವಿದ್ಯಾರ್ಥಿಗಳಿಗೆ 50% ಶುಲ್ಕ ರಿಯಾಯಿತಿ + ಶಿಷ್ಯವೇತನ ಇದೆ.
ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿದವರಿಗೆ 50% ರಿಯಾಯಿತಿ.
ಪ್ರತಿ ತಾಲೂಕಿಗೆ ಎಸ್ಎಸ್ಎಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದವರಿಗೆ ಸಂಪೂರ್ಣ ಉಚಿತ ಪ್ರವೇಶ.
ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಶೇಕಡ 95ಕ್ಕಿಂತ ಹೆಚ್ಚು ಅಂಕ ಪಡೆದವರಿಗೆ 50% ರಿಯಾಯಿತಿ ಇದೆ.
ಸೋತರು ಪರೀಕ್ಷೆ ಎದುರಿಸಿದ ಸಮಾಧಾನ ನಗಬಹುದು
ಗೆದ್ದರೆ ಸ್ಕಾಲರ್ ಶಿಪ್, ಸೋತರೂ ಪರೀಕ್ಷೆ ಎದುರಿಸಿದ ಅನುಭವ, ಆತ್ಮವಿಶ್ವಾಸ, ಮುಂದಿನ ವಾರ್ಷಿಕ ಪರೀಕ್ಷೆ ಹಾಗೂ ಜೀವನದ ಅಡಿಪಾಯ ಸರಿಪಡಿಸಿಕೊಳ್ಳಲು ಇರುವ ಸರಳ ಪರೀಕ್ಷೆ ಇದೆಂದರೂ ತಪ್ಪಾಗ ಲಿಕ್ಕಿಲ್ಲ.
ಇನ್ನೇಕೆ ತಡ? 29ಕ್ಕೆ ಹಿಮಾಲಯ ತಲುಪಿ!
ನ.29 ರವಿವಾರ ಬೆಳಿಗ್ಗೆ 9:30ಕ್ಕೆ ಪರೀಕ್ಷಾ ಕೇಂದ್ರಕ್ಕೆ ತಲುಪಬೇಕು
📚 ವಿಷಯಗಳು: ಗಣಿತ, ಸಾಮಾಜಿಕ ವಿಜ್ಞಾನ, ಭೂಗೋಳಶಾಸ್ತ್ರ, ಇಂಗ್ಲಿಷ್
🚌 ಅಂಕೋಲಾ ಮತ್ತು ಗೋಕರ್ಣ ದಿಂದ ಕಾಲೇಜಿಗೆ ಉಚಿತ ಬಸ್ ವ್ಯವಸ್ಥೆ ಇದೆ
📝 ಶಾಲೆಗೆ ನೀಡಿದ QR ಕೋಡ್ / ಲಿಂಕ್ ನಿಂದ ಗೂಗಲ್ ಫಾರ್ಮ್ ಭರ್ತಿ ಮಾಡಿ ಹೆಸರು ನೋಂದಾಯಿಸಿ
ಪ್ರಾಚಾರ್ಯ ಎಂ.ಐ. ಮಹಾಲೆ ಅವರು ಈ ಮಾಹಿತಿಯನ್ನು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
📞 ಮಾಹಿತಿಗೆ: 9448526365, 8884191887, 9538729277
📢 ಫಲಿತಾಂಶ: ಡಿಸೆಂಬರ್ 15
*ನಿಮ್ಮದೇ ಪ್ರತಿಭೆ, ನೀವು ಬಯಸಿದರೆ ಮಾತ್ರ ರಜಾದಿನದ ಸಾಮಾನ್ಯ ಸಮಯದಲ್ಲಿ ಪರೀಕ್ಷೆ – ಗೆದ್ದರೆ ಸಂಭ್ರಮ, ಸೋತರೂ ಯಾವುದೇ ಚಿಂತೆ ಇಲ್ಲ : ಪರೀಕ್ಷೆ ಎದುರಿಸಿ , ಮತ್ತೆ ಮನೆಗೆ ಮರಳಿ : ಅವಕಾಶ , ಸಾಮರ್ಥ್ಯ ಮತ್ತೆ ಬಳಸಿಕೊಂಡರಾಯಿತು ಎನ್ನುವ ಸಮಾಧಾನ ಇರಲಿ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ













