ಕುಮಟಾ: ಕಳೆದ 13 ವರ್ಷಗಳಿಂದ ಸದಭಿರುಚಿಯ ಕಾರ್ಯಕ್ರಮಗಳ ಮೂಲಕ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಮನೆಮಾತಾಗಿರುವ ವಿಸ್ಮಯ ಟಿ.ವಿ ಹೆಸರನ್ನು ಕೆಲವರು ದುರ್ಬಳಕೆ ಮಾಡುತ್ತಿರುವ ಬಗ್ಗೆ ಆತಂಕಕಾರಿ ಮಾಹಿತಿ ಬೆಳಕಿಗೆ ಬಂದಿದೆ. ಇತ್ತೀಚೆಗೆ, “ವಿಸ್ಮಯ ಟಿ.ವಿ” ಹೆಸರನ್ನು ಹೇಳಿಕೊಂಡು ಜಾತ್ರೆಗಳಲ್ಲಿ ಎಲ್ಇಡಿ ಮೂಲಕ ಜಾಹೀರಾತು ಪ್ರದರ್ಶನ ಮಾಡುತ್ತೇವೆ ಎಂದು ಹೇಳಿ ಹಣ ಸಂಗ್ರಹಿಸಲಾಗುತ್ತಿದೆ ಎಂಬ ದೂರುಗಳು ಕೇಳಿಬಂದಿವೆ.
ಈ ಬಗ್ಗೆ ವಿಸ್ಮಯ ಟಿ.ವಿ ಸ್ಪಷ್ಟಪಡಿಸುವುದು ಏನೆಂದರೆ, ಜಾತ್ರೆಗಳಲ್ಲಿ ವಿಸ್ಮಯ ಟಿ.ವಿ ಯಾವುದೇ ಎಲ್ಇಡಿ ವ್ಯವಸ್ಥೆಯನ್ನು ಮಾಡುತ್ತಿಲ್ಲ.
ಹಾಗೆಯೇ, ಜಾತ್ರೆಯ ಎಲ್ಇಡಿ ಜಾಹೀರಾತುಗಳನ್ನು ನಾವು ತೆಗೆದುಕೊಳ್ಳುತ್ತಿಲ್ಲ.. ನಮ್ಮ ಯಾವುದೇ ವರದಿಗಾರರು ಅಥವಾ ಮಾರ್ಕೆಟಿಂಗ್ ಪ್ರತಿನಿಧಿಗಳು ಇಂತಹ ಜಾಹೀರಾತು ಸಂಗ್ರಹಣೆಯಲ್ಲಿ ತೊಡಗಿಸಿಕೊಂಡಿಲ್ಲ. ನಮ್ಮ ಟಿ.ವಿ ಚಾನಲ್ಗೆ ಮಾತ್ರ ನಾವು ಜಾಹೀರಾತು ತೆಗೆದುಕೊಳ್ಳುತ್ತಿದ್ದೇವೆ. ಅಲ್ಲದೆ, ಅವುಗಳನ್ನು ನಮ್ಮ ಅಧಿಕೃತ ಸೋಷಿಯಲ್ ಪೇಜ್ನಲ್ಲಿ ಪರಿಶೀಲಿಸಬಹುದು.
ಆದ್ದರಿಂದ, ವೀಕ್ಷಕರು ಹಾಗೂ ಜಾಹೀರಾತುದಾರರು ಎಚ್ಚರಿಕೆಯಿಂದ ಇರಬೇಕು. ಜಾತ್ರೆಯ ವೇಳೆ ಎಲ್ಇಡಿಗೆಂದು ವಿಸ್ಮಯ ಟಿ.ವಿ ಹೆಸರಿನಲ್ಲಿ ಜಾಹೀರಾತು ಕೇಳಿದರೆ, ದಯವಿಟ್ಟು ಪರಿಶೀಲಿಸಿ, ಮೋಸಕ್ಕೆ ಒಳಗಾಗಬೇಡಿ. ಯಾವುದೇ ಅನುಮಾನ ಅಥವಾ ಗೊಂದಲ ಇದ್ದಲ್ಲಿ, ತಕ್ಷಣ ನಮ್ಮನ್ನು ಸಂಪರ್ಕಿಸಿ: 9591537698 . ವಿಸ್ಮಯ ಟಿ.ವಿ ಹೆಸರನ್ನು ದುರುಪಯೋಗಪಡಿಸಿಕೊಂಡು ಜಾಹೀರಾತು ಕಲೆಕ್ಷನ್ ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು.ಇಂತಹ ದುರ್ಬಳಕೆ ತಪ್ಪಿಸಲು ಜಾಹೀರಾತುದಾರರು ವಿಸ್ಮಯ ಟಿ.ವಿಯ ಅಧಿಕೃತ ಬಿಲ್ ಪಡೆದು ಬ್ಯಾಂಕ್ ಅಕೌಂಟ್ಗೆ ನೇರವಾಗಿ ಅಥವಾ ನಮ್ಮ ಬಿಲ್ ನಲ್ಲಿರುವ QR ಕೋಡ್ಗೆ ಹಣವನ್ನು ಸಂದಾಯಮಾಡಬಹುದಾಗಿದೆ.
ವಿಸ್ಮಯ ನ್ಯೂಸ್, ಕುಮಟಾ












